ಮೌಲಾನಾ ಅಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ೨೦೨೫-೨೬ನೇ ಸಾಲಿಗೆ ೬ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ,ಕ್ರ‍್ರಿಶ್ಚಿಯನ್,ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.೭೫ರಷ್ಟು ಇತರೆ ವರ್ಗದ ವಿದ್ಯಾರ್ಥಿಗಳಿಗೆಶೇ.೨೫ರಷ್ಟು ಪ್ರವೇಶಾತಿ ಕಲ್ಪಿಸಲಾಗುತ್ತಿದೆ. ಶೇ.೫೦ರಷ್ಟು ಬಾಲಕಿಯರಿಗಾಗಿ ಮೀಸಲಿರಿಸಲಾಗಿದೆ. ಅರ್ಜಿಯನ್ನು website:https://sevasindhuservices.karnataka.gov.inಮೂಲಕ ದಿನಾಂಕ ೧೦-೦೫-೨೦೨೫ರ ಒಳಗಾಗಿ ಸಲ್ಲಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ ೦೮೩೫೨-೨೯೫೫೨೩, ವಿಜಯಪುರ ಉಪ ವಿಭಾಗದ ತಾಲೂಕು ವಿಸ್ತರಣಾಧಿಕಾರಿ (ಮೊ:೮೯೭೦೭೦೪೯೮೬), ಇಂಡಿ ಉಪ ವಿಭಾಗದ ತಾಲೂಕು ವಿಸ್ತರಣಾಧಿಕಾರಿ (ಮೊ:೯೯೦೦೨೨೯೭೮೦), ವಿಜಯಪುರ ನಂ-೧ರ ಕುಂಬಾರಗಲ್ಲಿಯ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ಮಹಾದೇವಪ್ಪ ಸಂಗಪ್ಪನವರ (ಮೊಬೈಲ್: ೭೭೯೫೩೫೯೩೬೯), ವಿಜಯಪುರ ನಂ-೨ರ ನವಬಾಗನ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಅಲ್ತಮಷ್ ಅತ್ತಾರ (ಮೊಬೈಲ್:೯೧೬೪೭೭೭೩೧೭), ಸಿಂದಗಿಯ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಹಫೀಜುರಹಮಾನ್ ಲಾಳಸಂಗಿ (ಮೊಬೈಲ್: ೮೭೨೨೨೨೨೮೭೭), ಬಸವನ ಬಾಗೇವಾಡಿಯ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಂಗೂಬಾಯಿ ಸಾತಲಗಾಂವ (ಮೊಬೈಲ್: ೯೭೩೧೭೩೦೦೮೯), ನಾಲತವಾಡದ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯ ರಮೇಶ (ಮೊಬೈಲ್: ೯೮೪೪೪೯೩೩೦೬), ಮುದ್ದೇಬಿಹಾಳನ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಖೇಮು ರಾಠೋಡ (ಮೊಬೈಲ್: ೭೨೫೯೧೭೯೩೯೮), ಇಂಡಿ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ರವಿಚಂದ್ರ ಕಾಂಬಳೆ (ಮೊಬೈಲ್: ೭೮೯೨೩೭೧೭೦೯) ಹಾಗೂ ಆಲಮೇಲ ಮೌಲಾನಾ ಆಜಾದ್ ಮಾದರಿ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಸಿದ್ದಪ್ಪ ಕಾರಿಮುಂಗಿ (ಮೊಬೈಲ್: ೯೯೮೦೯೫೨೯೬೦)ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.