ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸದಾ ಕ್ರೀಯಾಶೀಲರಾಗಿ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿಜಯಪುರದ ಮಹಿಳಾ ಮತ್ತು ಶಿಶುಅಭಿವೃದ್ದಿ ಯೋಜನಾಧಿಕಾರಿ ರೇಷ್ಮಾ ವಿ. ಚವ್ಹಾಣ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸಮಾಜಶಾಸ್ತ್ರ ವಿಭಾಗ ಏರ್ಪಡಿಸಿದ್ದ “ಮಹಿಳೆಯರಲ್ಲಿ ಆಹಾರ ಮತ್ತು ಪೋಷಣೆಯ ಮಹತ್ವ” ಎಂಬ ವಿಷಯದ ಕುರಿತು ಮಾತನಾಡಿದರು.
ಯುವತಿ ಮತ್ತು ಮಹಿಳೆಯರ ಆರೋಗ್ಯಕ್ಕೆ ಪೋಷಕ ಆಹಾರದ ಮಹತ್ವವನ್ನು ವಿವರಿಸಿದರು. ಅವರು ಸಮತೋಲನ ಆಹಾರದ ಅಗತ್ಯತೆ ಮತ್ತು ಪೌಷ್ಠಿಕ ಅಂಶಗಳ ಪ್ರಾಮುಖ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಆರ್.ಎಚ್. ರಮೇಶ ವಹಿಸಿದ್ದರು. ಅಕ್ಕಮಹಾದೇವಿ ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಎಸ್.ಜೆ.ಮಾಡ್ಯಾಳ, ಪ್ರೊ. ರವಿಕುಮಾರ ಅರಳಿ, ಪ್ರೊ. ಸಂಗಮೇಶ ಹಿರೇಮಠ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವು ಮಹಿಳೆಯರ ಆಹಾರ ಹಾಗೂ ಆರೋಗ್ಯ ಜಾಗೃತಿಗೆ ಪ್ರಮುಖ ವೇದಿಕೆಯಾಗಿದ್ದು,
ಎಲ್ಲರಲ್ಲಿಯೂ ಪೋಷಣೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ನೀಲಾಬಾಯಿ ಆರ್. ಸ್ವಾಗತಿಸಿದರು, ಕು.ಐಶ್ವರ್ಯ ನಾದ ವಂದಿಸಿದರು, ಪ್ರೊ.ಸುನಂದಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.