ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ನೀರು ಪ್ರತಿ ಜೀವಿಯ ಜೀವ ಜಲ ಈ ನೀರನ್ನು ನಾವುಗಳು ಮಿತವಾಗಿ ಬಳಸಿ, ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸಬೇಕು ಮತ್ತು ಹಸಿರು ಬೆಳೆಸುವಲ್ಲಿ ನಾವು ಶ್ರದ್ದೆಯಿಂದ ಕಾರ್ಯ ಮಾಡಿದರೆ ಮಳೆಯಾಗಿ ಜೀವ ಸಂಕುಲ ಉಳಿಯಲು ಸಾಧ್ಯ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ ಝಾ ಹೇಳಿದರು.
ತಾಲೂಕಿನ ಕೂಡಗಿ ಎನ್ ಟಿಪಿಸಿ ಯಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರು ಉಳಿಸಿ ಜೀವಸಂಕುಲ ಉಳಿಸಿ ಎಂಬ ವಿನೂತನ ಅಭಿಯಾನದಲ್ಲಿ ಮಾತನಾಡಿದರು.
ಎನ್ ಟಿಪಿಸಿ ಜಿಎಂ ಸಂತೋಷ್ ತಿವಾರಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ. ಏಕೆಂದರೆ ಉಸಿರಾಡಲು ಶುದ್ಧ ಗಾಳಿ ನೀರು ಆಹಾರ ಸಿಗಬೇಕಾದರೆ ನಾವು ನಮ್ಮ ಸುತ್ತಲಿನ ಪ್ರದೇಶದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಹೇಳಿದರು.
ಅಭಿಯಾನದಲ್ಲಿ ನೀರಿನ ಸಂರಕ್ಷಣೆ, ಮಿತವ್ಯಯ ಬಳಕೆ ಗುರಿಯನ್ನು ಹೊಂದಿರುವ ಜಾಗೃತಿ ಅಭಿಯಾನದಲ್ಲಿ ಭಿತ್ತಿಪತ್ರಗಳು ರಾರಾಜಿಸುತ್ತಿವೆ ಜೋತೆಗೆ ಜಲ ಸಂರಕ್ಷಣೆ ಜಾಗೃತಿ ಮೂಡಿಸುವ ಪ್ರತಿಜ್ಞಾ ವಿಧಿಯನ್ನು ಎಲ್ಲಾ ನೌಕರರು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಿಥಾಲಿ ಮಹಿಳಾ ಸಮಿತಿಯ ಮಿಥಾಲಿ ಮಹಿಳಾ ಸಮಿತಿಯ ಕಚೇರಿ ನೌಕರರು, ಒಕ್ಕೂಟಗಳು ಮತ್ತು ಕಲ್ಯಾಣ ಸಂಸ್ಥೆಗಳ ಕಚೇರಿ ನೌಕರರೂ ಹಾಗೂ ಕಾರ್ಮಿಕರು ಹಾಜರಿದ್ದರು.