ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಸೋಮಜಾಳ ಗ್ರಾಮದಲ್ಲಿ ಆಯೋಜನೆ | ಬೆಳಗ್ಗೆ ೭ ಗಂಟೆಗೆ ಸ್ಪರ್ಧೆ ಆರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸೋಮಜಾಳ ಗ್ರಾಮದಲ್ಲಿ ನ.19 ರಂದು ಆಕಾಶ ಬಿರಾದಾರ ಫೌಂಡೇಶನ್ ತನ್ನ ಎರಡನೆಯ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಗುರುವಾರ ಸೋಮಜಾಳ ಗ್ರಾಮದಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಈ ಮ್ಯಾರಥಾನ್ ಸ್ಪರ್ಧೆಯಲ್ಲಿ 5 ಕಿ.ಮೀ ಮತ್ತು 10 ಕಿ.ಮೀ ದೂರದ ಎರಡು ವಿಭಾಗಗಳನ್ನು ಮಾಡಲಾಗಿದೆ. 5 ಕಿ.ಮೀ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಗರಿಷ್ಠ ವಯೋಮಿತಿ 17 ವರ್ಷ ಮತ್ತು 10 ಕಿ.ಮೀ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಗರಿಷ್ಠ ವಯೋಮಿತಿ 20 ವರ್ಷ ಎಂದು ನಿಗದಿಪಡಿಸಲಾಗಿದೆ.
ಎರಡೂ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನಗಳ ವಿಜೇತರಿಗೆ ಕ್ರಮವಾಗಿ ರೂ.5000/-, ರೂ.3000/-, ಹಾಗೂ ರೂ.2000/- ಬಹುಮಾನದ ಮೊತ್ತವನ್ನು ನೀಡಲಾಗುತ್ತದೆ.
ಮ್ಯಾರಥಾನ್ ಸ್ಪರ್ಧೆಯನ್ನು ಪಂಜಾಬ್ ರಾಜ್ಯದ ರಾಷ್ಟ್ರೀಯ ಕ್ರೀಡಾ ತರಬೇತುದಾರ ಅಮರಜೀತ್ ಹಾಗೂ ಕಲಕತ್ತಾದ ಪ್ರತಿಷ್ಟಿತ ಶೂ ಕಂಪನಿ ಮಾಲಿಕ ಸಾದನೀಕ್ ಅವರು ಆಗಮಿಸಲಿದ್ದು, ಅನೇಕ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರಣ ಜಿಲ್ಲೆಯ ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಬಾಗವಹಿಸಿ ಪ್ರೋತ್ಸಾಹಿಸಬೇಕೆಂದು ಎ.ಬಿ ಫೌಂಡೇಶನ್ ಸಂಸ್ಥಾಪಕರು ಮತ್ತು ಆಯೋಜಕರಾದ ಕೆ.ಎಸ್.ಬಿರಾದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


