ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮಾ ೨೩ ರಂದು ಬೆಳಿಗ್ಗೆ ೧೦:೩೦ಕ್ಕೆ ಪಟ್ಟಣದ ಟಾಪ್ ಇನ್ ಟೌನ್ ಹಾಲ್ ನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದು ಪಟ್ಟಣದ ಎಲ್ಲ ನಾಗರಿಕರು ಆಗಮಿಸುವಂತೆ ಮಹಾಸಭಾದ ತಾಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲ ವಿನಂತಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಸಮಾರಂಭವನ್ನು ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಉದ್ಘಾಟಿಸಲಿದ್ದು, ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯತಿಥಿಗಳಾಗಿ ವಿಶ್ರಾಂತ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ, ಅತಿಥಿಗಳಾಗಿ ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ, ಜಿಲ್ಲಾ ಉಸ್ತುವಾರಿ ರಾಜಶೇಖರ ಸೀರಿ, ಬಾಪುಗೌಡ ಪಾಟೀಲ, ಮಲ್ಲನಗೌಡ ಬಿರಾದಾರ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಅವಿಭಕ್ತ ಕುಟುಂಬದ ಬಸವಂತ್ರಾಯ ಗೋಳಿ, ಆದರ್ಶ ರೈತ ಶರಣಪ್ಪ ಗೂಳಿ, ಕ್ರಿಯಾಶೀಲ ಶಿಕ್ಷಕ ಬಸವರಾಜ ಲಮಾಣಿ, ದೇಶ ಸೇವೆಗೈದ ಬಸವರಾಜ ಹಡಪದ, ಶ್ರಮಿಕ ಶರಣಪ್ಪ ಚಲವಾದಿ ವಿಶೇಶ ಸನ್ಮಾನ ಹಾಗೂ ಪಟ್ಟಣದ ಸರ್ವ ಸಮಾಜದ ಅಧ್ಯಕ್ಷರುಗಳಿಗೆ ಸನ್ಮಾನಿಸಿ ಗೌರವಿಸಲಾಗುವದು. ಪಟ್ಟಣದ ಎಲ್ಲ ನಾಗರಿಕರು ಆಗಮಿಸಿ ಸಮಾರಂಭಕ್ಕೆ ಶೋಭೆ ತರಬೇಕು ಎಂದು ವಿನಂತಿಸಿದರು.
ಈ ವೇಳೆ ಅಕ್ಕಮಹಾದೇವಿ ನಾಲತವಾಡ, ವಿದ್ಯಾವತಿ ತಡಸದ, ಕಮಲಾಬಾಯಿ ಬಿರಾದಾರ, ಸುವರ್ಣ ಕಟ್ಟಿ, ಸಂಗಣ್ಣ ಕಂಚ್ಯಾಣಿ, ಬಾಪುಗೌಡ ಪಾಟೀಲ, ರವಿ ತಡಸದ, ಉಮೇಶ ಕಂಠಿ, ದಾನಯ್ಯ ಅಂಗಡಿ, ಅಶೋಕ ಚಟ್ಟೇರ, ರವಿ ನಂದೆಪ್ಪನವರ, ಎಸ್.ಎ.ಬೇವಿನಗಿಡದ ಸೇರಿದಂತೆ ಮತ್ತೀತರರು ಇದ್ದರು.