ಉದಯರಶ್ಮಿ ದಿನಪತ್ರಿಕೆ
ಇಂಡಿ: ಹೋಳಿ ಹಬ್ಬಕ್ಕೆ ಸೌಹಾರ್ಧ ಬೆಸೆಯುವ ಶಕ್ತಿ ಇದ್ದು ಎಲ್ಲರೂ ಸಾಮರಸ್ಯದಿಂದ ಹೋಳಿ ಮತ್ತು ರಮಜಾನ ಹಬ್ಬ ಆಚರಿಸಬೇಕು ಎಂದು ಇಂಡಿ ಪಟ್ಟಣ ಸಿ.ಪಿ.ಐ ಪ್ರದೀಪ ಬಿಸೆ ಹೇಳಿದರು.
ಪಟ್ಟಣದ ಶಹರ ಪೋಲಿಸ ಠಾಣೆಯಲ್ಲಿ ಹೋಳಿ ಮತ್ತು ರಮಜಾನ ಕುರಿತು ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
ಜಾತಿ,ಮತ,ಪಂಥ ಎನ್ನದೇ ಎಲ್ಲರೂ ಏಕತೆಯಿಂದ ಹೋಳಿ ಮತ್ತು ರಮಜಾನ ಆಚರಿಸುವ ಪರಂಪರೆ ನಡೆದುಕೊಂಡು ಬಂದಿದ್ದು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸದಸ್ಯ ದೇವೆಂದ್ರ ಕುಂಬಾರ, ಕರವೇ ಅಧ್ಯಕ್ಷ ಬಾಳು ಮುಳಜಿ, ಅಯೂಬ ನಾಟಿಕಾರ,ರೈಸ್ ಅಷ್ಟೆಕರ, ಪ್ರಾದ್ಯಾಪಕ ವಿಜು ರಾಠೋಡ ಮಾತನಾಡಿ ಹೋಳಿ ಮತ್ತು ರಮಜಾನ ದೇಶದಲ್ಲಿ ಪ್ರಸಿದ್ಧಿ ಪಡೆದ ಹಬ್ಬಗಳು. ಎಲ್ಲರೂ ಸೇರಿ ಹಬ್ಬ ಆಚರಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು, ಎಲ್ಲರೂ ಏಕತೆಯಿಂದ ರಂಗಿನಾಟದಲ್ಲಿ ಭಾಗವಹಿಸಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಬ್ಬ ಆಚರಿಸಲು ಸಹಕರಿಸಬೇಕು ಎಂದರು.
ಚಂದ್ರಶೇಖರ ಹೊಸಮನಿ, ಸಿದ್ದು ಕಟ್ಟಿಮನಿ, ಪರಶುರಾಮ ಬಾವಿಕಟ್ಟಿ, ಯಲ್ಲಪ್ಪ ಬಂಡೆನವರ, ಅಮರ ಬಾಸುತಕರ, ಶ್ರೀಧರ ಕ್ಷತ್ರಿ, ರಸೂಲ ಮಾಶ್ಯಾಳಕರ ಮತ್ತಿತರಿದ್ದರು.
ಇದೇ ವೇಳೆ ಇಂಡಿಗೆ ನೂತನವಾಗಿ ಆಗಮಿಸಿದ ಸಿಪಿಐ ಪ್ರದೀಪ ಬಿಸೆ ಇವರನ್ನು ಪುರಸಭೆ ಮತ್ತು ನಗರ ಮತ್ತು ತಾಲೂಕಿನ ಜನತೆಯ ಪರವಾಗಿ ಸನ್ಮಾನಿಸಲಾಯಿತು.