ಸಮಸ್ಯೆ ಅರಿಯಲು ಜಿಲ್ಲಾಧಿಕಾರಿ ಸ್ಥಳಕ್ಕೆ ಖುದ್ದು ಭೇಟಿ | ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಮತ್ತು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವೇಗವಾಗಿ ಬೆಳೆಯುತ್ತಿರುವ ವಿಜಯಪುರ ನಗರದ ವಜ್ರ ಹನುಮಾನ ರೈಲ್ವೆ ಗೇಟ್ ಹತ್ತಿರ ತುಂಬಾ ದಿನಗಳಿಂದ ಭಾರಿ ಸಂಚಾರಿ ದಟ್ಟಣೆ ಆಗುತ್ತಿದ್ದು ಇದರಿಂದ ರೈಲ್ವೆ ಲೈನ್ ಆಚೆ ಇರುವ ಸಾಕಷ್ಟು ಹೊಸ ಬಡಾವಣೆಗಳ ಸುಮಾರು ೫೦ ಸಾವಿರ ಜನರು ಮತ್ತು ಆ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಗ್ರಾಮೀಣ ಪ್ರದೇಶದ ಜನರಿಗೆ ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ರೋಗಿಗಳಿಗೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಾವು ಖುದ್ದು ಬಂದು ಪರಿಶೀಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಮತ್ತು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಜಿಲ್ಲಾಧಿಕಾರಿಯವರನ್ನು ಸ್ವತಃ ಸ್ಥಳಕ್ಕೆ ಆಹ್ವಾನಿಸಿದ್ದರು.
ಇತ್ತೀಚಿಗೆ ಡಬಲ್‌ನ ರೈಲ್ವೆ ಲೈನ್ ನಿರ್ಮಾಣವಾದ ನಂತರ ಸಾರ್ವಜನಿಕರು ದೀರ್ಘ ವಿಳಂಬ ಅನುಭವಿಸುತ್ತಿದ್ದಾರೆ. ಕಾರಣ ಸಂಚಾರ ದಟ್ಟಣೆ ಕಡಿಮೆ ಮಾಡಲು ವಜ್ರ ಹನುಮಾನ ದೇವಸ್ಥಾನದ ಮುಂದೆ ಮೇಲ್ಸತುವೆ ನಿರ್ಮಾಣ ಮತ್ತು ಸಂತೋಷ ಮಾತಾ ದೇವಸ್ಥಾನದ ಮುಂದಿನಿಂದ ಚಾಂದಪೂರ ಕಾಲೋನಿ ಹೋಗುವ ಮಾರ್ಗ ಮಧ್ಯ ಬರುವ ರೈಲ್ವೆ ಲೈನ್‌ಗೆ ಅಂಡರ್ ಪಾಸ್ ನಿರ್ಮಿಸುವುದೊಂದೆ ಪರಿಹಾರವೆಂದು ಜಿಲ್ಲಾಧಿಕಾರಿಯವರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಬಗ್ಗೆ ಆದಷ್ಟು ಬೇಗ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಬೆಳಿಗ್ಗೆ ಹಾಗೂ ಸಂಜೆಯಂತೂ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದು ಇದೊಂದು ತರಹ ಟ್ರಾಫಿಕ್ ಚಕ್ರವ್ಯೂಹವಾಗಿ ಪರಿಣಮಿಸಿದೆ ಎಂದು ಹಮೀದ್ ಮುಸ್ಲಿಫ್ ಮತ್ತು ಸೋಮನಾಥ್ ಕಳ್ಳಿಮನಿ, ಅವರು ಅಭಿಪ್ರಾಯಪಟ್ಟರು.
ಈ ವೇಳೆ ಮಹಾನಗರ ಪಾಲಿಕೆ ಅಧಿಕಾರಿ ವರ್ಗ, ಸಾಯಿ ಪಾರ್ಕ್, ಗೋಕುಲ್ ನಗರ್, ಚಾಂದಪೂರ ಕಾಲೋನಿ, ಹೌಸಿಂಗ್ ಬೋರ್ಡ್ ಇನ್ನಿತರ ಬಡಾವಣೆಗಳ ಅನೇಕ ಹಿರಿಯರು ಯುವಕರು ಉಪಸ್ಥಿತರಿದ್ದರು.

