Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ

ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ಆಗ್ರಹಿಸಿ ಮನವಿ
(ರಾಜ್ಯ ) ಜಿಲ್ಲೆ

ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ಆಗ್ರಹಿಸಿ ಮನವಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಬ್ರಹತ್ ಪ್ರತಿಭಟನಾ ಮೆರವಣಿಗೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲಾ ಗುತ್ತಿಗೆದಾರರ ಸಂಘದಿಂದ ವಿವಿಧ ಸರಕಾರಿ ಇಲಾಖೆಗಳಲ್ಲಿ ಕೆಲಸ ನಿರ್ವಹಿಸಿರುವ ಗುತ್ತಿಗೆದಾರರ ಬಾಕಿ ಹಣ ಪಾವತಿಸಲು ವಿಳಂಬವಾಗುತ್ತಿರುವದನ್ನು ಖಂಡಿಸಿ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಹಾತ್ಮಾ ಗಾಂಧಿ ವೃತ್ತ, ಬಸವೇಶ್ವರ ವೃತ್ತ ಅಂಬೇಡ್ಕರ ಮಾರ್ಗವಾಗಿ ಪ್ರತಿಭಟನೆಯೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಘನವೆತ್ತ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ಜಿಲ್ಲಾ ಗುತ್ತಿಗೆದಾರರ ಸಂಘ ಪ್ರಧಾನ ಕಾರ್ಯದರ್ಶಿ ಆಯ್.ಎಂ. ಪಟ್ಟಣಶೆಟ್ಟಿ ಮಾತನಾಡಿ, ಕಳೆದ ೨-೩ ವರ್ಷಗಳಿಂದ ಗುತ್ತಿಗೆದಾರರು ವಿವಿಧ ಇಲಾಖೆಗಳಲ್ಲಿ ಲೋಕೋಪಯೋಗಿ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯತ, ಚಿಕ್ಕ ನೀರಾವರಿ, ಮಹಾನಗರಪಾಲಿಕೆ, ಪಟ್ಟಣ ಪಂಚಾಯತಿ ಹೀಗೆ ವಿವಿಧ ರೀತಿಯ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಿರುವ ಕಾಮಗಾರಿಗಳ ಹಣ ಪಾವತಿ ವಿಳಂಬವಾಗುತ್ತಾ ಬಂದಿದೆ. ಆದರೆ ಬಾಕಿ ಬಿಲ್‌ಗಳು ಇನ್ನೂವರೆಗೂ ಪಾವತಿಯಾಗಿರುವದಿಲ್ಲ. ಇದರಿಂದ ಗುತ್ತಿಗೆದಾರರು ಆರ್ಥಿಕವಾಗಿ ತೀವ್ರ ತೊಂದರೆಗೊಳಪಟ್ಟಿರುತ್ತಾರೆ. ಸದರಿ ಕಾಮಗಾರಿಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಸಿಮೆಂಟ್, ಕಬ್ಬಿಣ, ಡಾಂಬರ ಹಾಗೂ ಇಟ್ಟಿಗೆ, ಬಣ್ಣ, ಮರಳು, ಜಲ್ಲಿ ಪೂರೈಸಿದ ವ್ಯಾಪಾರಸ್ಥರು ಬಾಕಿ ಹಣ ಪಾವತಿಸಲು ಒತ್ತಾಯಿಸುತ್ತಿದ್ದಾರೆ. ಅದರಂತೆ ಸಾಲ ನೀಡಿದ ಬ್ಯಾಂಕಗಳು, ಸ್ವಸಹಾಯಕ ಸಂಘಗಳು, ವೈಯಕ್ತಿವಾಗಿ ಕೈಗಡ ಪಡೆದ ಸಾಲ ಕೊಟ್ಟವರು ಎಲ್ಲರು ಬಾಕಿ ಹಣ ಪಾವತಿಸುವ ಸಲುವಾಗಿ ಒತ್ತಡ ಹೇರುತ್ತಿದ್ದಾರೆ. ಈ ರೀತಿಯಾಗಿ ಒತ್ತಡದಿಂದ ರಾಜ್ಯದಲ್ಲಿ ಈಗಾಗಲೇ ಸುಮಾರು ೪-೫ ಜನ ಗುತ್ತಿದಾರರು ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಈ ತರಹದ ಉದಾರಹರಣೆಗಳು ನಮ್ಮ ಜಿಲ್ಲೆಯಲ್ಲಿ ಸಹ ಗುತ್ತಿದಾರರು ಆತ್ಮಹತ್ಯೆಯ ನಿರ್ದಾರಗಳನ್ನು ಕೈಗೊಳ್ಳಬಹುದು ಬಾಕಿ ಹಣ ಬಿಡುಗಡೆ ಕುರಿತು ಹಲವಾರು ಬಾರಿ ವಿಧಾನ ಸಭಾ ಕಲಾಪದಲ್ಲಿಯೂ ಪ್ರಸ್ತಾಪವಾಗಿರುತ್ತದೆ. ಅಲ್ಲದೆ ಗುತ್ತೆದಾರರು ಸಂಘದ ಮೂಲಕ ರಾಜ್ಯದಲ್ಲಿ ಹಾಗೂ ಜಿಲ್ಲೆಯಲ್ಲಿಯೂ ಈಗಾಗಲೇ ಮನವಿ ಸಲ್ಲಿಸಲಾಗಿರುತ್ತದೆ. ಆದಾಗ್ಯೂ ಯವುದೇ ಕ್ರಮ ಜರುಗಿರುವುದಿಲ್ಲ. ೨೦೨೫ ಫೆಬ್ರುವರಿ ಅಂತ್ಯದೊಳಗೆ ಸರಕಾರವು ನಮ್ಮ ಬೇಡಿಕೆಯನ್ನು ಈಡೇರಿಸದೆ ಇದ್ದರೆ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಆತ್ಮಹತ್ಯೆಯಂತಹ ನಿರ್ಧಾರಗಳು ಕೈಗೊಂಡರೆ ಇದಕ್ಕೆ ಸರಕಾರವೇ ನೇರ ಹೊಣೆಯಾಗಿರುತ್ತದೆ. ಮಾನ್ಯರು ನಮ್ಮ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿ.ಆರ್. ರೂಢಗಿ ಅಧ್ಯಕ್ಷರು, ಅರುಣ ಎಸ್. ಮಠ ಗೌರವ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಎಸ್.ಆರ್. ಡೋಣೂರಮಠ, ಉಪಾಧ್ಯಕ್ಷರು ಎಚ್.ಆರ್. ಚಿಂಚಲಿ, ಕಾರ್ಯದರ್ಶಿ ಸುನೀಲ ಉಳ್ಳಾಗಡ್ಡಿ, ತಾಂತ್ರಿಕ ಸಲಹೆಗಾರರು ಎಲ್.ಡಿ ಮಡಗೊಂಡ, ಗುರು ಕವಲಗಿ, ರಮೇಶಗೌಡ ಪಾಟೀಲ, ಅರುಣಕುಮಾರ ಬಿ. ನರಸರಡ್ಡಿ, ಮುತ್ತು ಎಂ. ಮುಂಡೇವಾಡಿ, ಸುರೇಶಗೌಡ ಪಾಟೀಲ, ಎಂ.ಆರ್. ತಾಂಬೋಳೆ, ಸುಜಿತ ಎಸ್. ಬಿಜ್ಜಲಬಾವಿ, ಸಿದ್ದು ಬಿರಾದಾರ, ಶ್ಯಾಮ ಪಾತ್ರದ, ಜೆ.ಜಿ. ಕಲ್ಲೂರ, ಆರ್.ಎಂ. ಮಾವಿನಗಿಡದ, ಎ.ಎಸ್. ಬಿರಾದಾರ, ಆರ್.ಬಿ. ನಂದ್ಯಾಗೋಳ, ಎಸ್.ಸಿ. ಚಿಕ್ಕರಡ್ಡಿ, ಬಿ.ಎಸ್. ಬಿರಾದಾರ,ಎನ್.ವಿ. ಕುಲಕರ್ಣಿ, ಎಸ್.ಎಸ್. ಆಲೂರ, ಎಸ್.ಟಿ. ಬಿಜ್ಜಲಬಾವಿ, ಎ.ಎಸ್. ಪಾಟೀಲ, ಪ್ರವೀಣ ಹಿರೇಮಠ, ಸಿ.ಆರ್. ಗಂಗಾಧರ, ಉಮೆಶ ಮೆಟಗಾರ, ಸಂಜು ಜತ್ತಿ, ಡಿ.ಜಿ. ಬಿರಾದಾರ, ರವೀಂದ್ರ ಬಿಜ್ಜರಗಿ, ಎಸ್.ಎಸ್. ಸಿರಾಡೋಣ, ಶಿವು ಗದಿಗೆಪ್ಪಗೌಡ, ಸುಭಾಸ ಪಾಟೀಲ, ರಾಜು ಪದ್ಮಣ್ಣವರ ಮುಂತಾದವರು ಭಾಗವಹಿಸಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ

ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ

ಸಮಾಪನೆಗೊಂಡ ೮ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆಗೆ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!
    In (ರಾಜ್ಯ ) ಜಿಲ್ಲೆ
  • ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ
    In (ರಾಜ್ಯ ) ಜಿಲ್ಲೆ
  • ಸಮಾಪನೆಗೊಂಡ ೮ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿಷ್ಕ್ರಿಯ ಸಹಕಾರ ಸಂಘಗಳ ನೋಂದಣಿ ರದ್ದತಿ ಪ್ರಕ್ರಿಯೆ ಆರಂಭ
    In (ರಾಜ್ಯ ) ಜಿಲ್ಲೆ
  • ಕರಡು ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿ :ಡಿಸಿ
    In (ರಾಜ್ಯ ) ಜಿಲ್ಲೆ
  • ಗರ್ಭಿಣಿಯರ ಆರೋಗ್ಯ ತಪಾಸಣೆ, ನೋಂದಣಿ ಕಡ್ಡಾಯ
    In (ರಾಜ್ಯ ) ಜಿಲ್ಲೆ
  • ಇಂಡಿ: ಬಿಜೆಪಿಯಿಂದ ಮುಂದುವರೆದ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಲ ಸಂಪನ್ಮೂಲ ಸಚಿವರು ಬೇಕು
    In (ರಾಜ್ಯ ) ಜಿಲ್ಲೆ
  • ಪ್ರತಿ ಶನಿವಾರ & ರವಿವಾರ ಓಟಗಾರರಿಗೆ ಉಚಿತ ತರಬೇತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.