ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮದವೇರಿದ ಎಮ್ಮೆಯೊಂದು ಇಲ್ಲಿನ ಬಸ್ ನಿಲ್ದಾಣದಲ್ಲಿ ನುಗ್ಗಿ ಇಬ್ಬರು ಬೈಕ್ ಸವಾರರಿಗೆ ಗುದ್ದಿ ಚಿಕ್ಕ ಪುಟ್ಟ ಗಾಯಗೊಳಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಏಕಾಏಕಿ ಬಸ್ ನಿಲ್ದಾಣಕ್ಕೆ ನುಗ್ಗಿದ ಎಮ್ಮೆ ವಾಹನಗಳ ಮೇಲೆ ನುಗ್ಗಲು ಆರಂಭಿಸಿದೆ. ಇದನ್ನು ಕಂಡ ಸಾರ್ವಜನಿಕರು ಕೆಲಹೊತ್ತು ಭಯಭೀತರಾಗಿದ್ದರು. ಬಳಿಕ ಪೊಲಿಸರಿಗೆ, ಪುರಸಭೆಯವರಿಗೆ ತಿಳಿಸಿದ್ದಾರೆ. ಎಮ್ಮೆಯನ್ನು ಹಿಡಿಯಲು ಸಾರ್ವಜನಿಕರು, ಪುರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟರೂ ಯಾರ ಕೈಗೂ ಸಿಗದೇ ಬಸ್ ನಿಲ್ದಾಣದಿಂದ ಕಾಲ್ಕಿತ್ತು, ಕಳೆಯ ಸರ್ಕಾರಿ ಆಸ್ಪತ್ರೆಯೊಳಗೆ ನುಗ್ಗಿತ್ತು. ಬಳಿಕ ಜೆಸಿಬಿ ಬಳಸಿದಾಗ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ದೈರ್ಯ ಮಾಡಿ ಎಮ್ಮೆಯ ಕುತ್ತಿಗೆ ಬಳಿಯ ಹಗ್ಗ ಹಿಡಿದಾಗ ಸೆರೆಯಾಯಿತು.

