ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೆ ಸಂಜೆ ೬ ಗಂಟೆಯಿAದ ಮರುದಿನ ಬೆಳಿಗ್ಗೆ ೬ ಗಂಟೆಯವರೆಗೆ ಓಪನ್ ಡೆಲ್ಟಾ ಮುಖಾಂತರ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ಈ ಅವಧಿಯಲ್ಲಿ ರೈತರು ನೀರಾವರಿ ಪಂಪಸೆಟ್‌ಗಳನ್ನು ಬಳಕೆ ಮಾಡದಂತೆ ಹೆಸ್ಕಾಂ ಅಧೀಕ್ಷಕ ಅಭಿಯಂತರರು ಮನವಿ ಮಾಡಿಕೊಂಡಿದ್ದಾರೆ.
ರೈತರ ಮಕ್ಕಳ ವಿಧ್ಯಾಭ್ಯಾಸದ ಅನುಕೂಲಕ್ಕಾಗಿ ಬೆಳಕಿನ ಅವಶ್ಯಕತೆಯನ್ನು ಗಮನಿಸಿ, ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೆ ಸಂಜೆ ೬ ರಿಂದ ಬೆಳಿಗ್ಗೆ ೬ ಗಂಟೆಯವರೆಗೆ ಸರ್ಕಾರದ ನಿರ್ದೇಶನದಂತೆ ೧೧ಕೆವ್ಹಿ ನೀರಾವರಿ ಪಂಪಸೆಟ್ ವಿದ್ಯುತ್ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಹಾಗೂ ಪ್ರತಿ ಮಾರ್ಗದ ಮೇಲೆ ಇರುವ ತೋಟದ ಮನೆಗಳಿಗೆ ಬೇಕಾಗುವ ವಿದ್ಯುತ್ ಲೆಕ್ಕಾಚಾರ ಮಾಡಿ ನಿಗದಿಪಡಿಸಲಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಪಂಪಸೆಟ್ ಬಳಕೆ ಮಾಡಿದರೆ ಮಾರ್ಗದ ಭಾರವು ನಿಗದಿತ ಭಾರಕ್ಕಿಂತ ಹೆಚ್ಚಾಗಿ ಅಟೋಮೆಟಿಕ್ ಟ್ರಿಪ್ ಆಗುವುದರಿಂದ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಅಡಚಣೆಯಾಗುತ್ತದೆ. ಆದ್ದರಿಂದ ರೈತರು ಈ ಅವಧಿಯಲ್ಲಿ ನೀರಾವರಿ ಪಂಪಸೆಟ್‌ಗಳನ್ನು ಬಳಕೆ ಮಾಡದೇ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
