ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಂಚಾಯತ್‌ರಾಜ ವ್ಯವಸ್ಥೆಯಲ್ಲಿ ಗಣಕಯಂತ್ರ ನಿರ್ವಾಹಕರ ಕೊಡುಗೆ ಅಪಾರ. ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ತಂತ್ರಜ್ಞಾನದ ನೆರವಿನೊಂದಿಗೆ ಗಣಕಯಂತ್ರ ನಿರ್ವಾಹಕರ ಕೆಲಸದಿಂದ ಸಾಕಷ್ಟು ಪ್ರಗತಿ ಸಾಧಿಸಲಿದೆ ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.
ಸಿಂದಗಿ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಗಣಕ ಯಂತ್ರ ಪಿತಾಮಹ ಚಾರ್ಲ್ಸ್ ಬ್ಯಾಬೇಜ್‌ರವರ ಜನ್ಮ ದಿನೋತ್ಸವವನ್ನು ಕರ್ನಾಟಕ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶದಂತೆ ಕಂಪ್ಯೂಟರ್ ಆಪರೇಟರ್ ದಿವಸ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೧೮-೧೯ನೇ ಶತಮಾನದಲ್ಲಿ ವಿಜ್ಞಾನಿ, ಗಣಿತ ತಜ್ಞ, ತತ್ವಶಾಸ್ತ್ರಜ್ಞರಾದ ಚಾರ್ಲ್ಸ್ ಬ್ಯಾಬೇಜ್‌ರವರು ಯುದ್ಧದ ಸಂದರ್ಭದಲ್ಲಿ ಯುದ್ಧ ಸಾಮಗ್ರಿ ಸಲಕರಣೆಗಳನ್ನು ಲೆಕ್ಕ ಪತ್ರ ಇಡಲು ತೊಂದರೆಯಾದ ಸಮಯದಲ್ಲಿ ಅವಿಸ್ಕರಿಸಿದ ತಂತ್ರವೇ ಗಣಕಯಂತ್ರ ಅದುವೇ ಇಂದಿನ ನಮ್ಮ ಇಲಾಖೆಯಲ್ಲಿ ಬಳಸಲು ಅನುಕೂಲವಾಗಿದೆ.
ಈ ವೇಳೆ ದೇವರ ಹಿಪ್ಪರಗಿ, ಆಲಮೇಲ ಮತ್ತು ಸಿಂದಗಿ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗಣಕಯಂತ್ರ ನಿರ್ವಾಹಕರು ಸೇವಾ ಭದ್ರತೆ, ಕೆಲಸಕ್ಕೆ ತಕ್ಕಂತೆ ಸಂಬಳ ನೀಡುವಂತೆ ನೀಡಬೇಕು. ಹಾಗೂ ಹೆಚ್ಚುವರಿ ಕೆಲಸ ಉಳಿದ ಸಿಬ್ಬಂದಿಗಳಿಗೆ ಹಂಚಿಕೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ದೇವರ ಹಿಪ್ಪರಗಿ ಇಒ ಭಾರತಿ ಚಲುವಯ್ಯ, ಆಲಮೇಲ ಇಒ ಪರಿದ ಪಟಾಣ, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ಎ.ಎ.ದುರ್ಗದ, ಶಿವಾನಂದ ಮೂಲಿಮನಿ, ಶಾಂತನಗೌಡ ನ್ಯಾಮಣ್ಣವರ, ಆಲಮೇಲ ಸಹಾಯಕ ನಿರ್ದೇಶಕ ಶೋಭಾ ಮುದುಗಲ, ಪಿಡಿಒ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ದೊಡಮನಿ, ಕಂಪ್ಯೂಟರ್ ಆಪರೇಟರ್ ಸಂಘದ ಅಧ್ಯಕ್ಷ ಸಂಪತ್‌ಕುಮಾರ ಜೈನ ಸಿಂದಗಿ, ಅಕ್ಬರ್ ಇನಾಮದಾರ ಆಲಮೇಲ, ರವಿ ಗೊಟೂರ, ಭೀಮರಾಯ ಚೌಧರಿ ಸೇರಿದಂತೆ ದೇವರ ಹಿಪ್ಪರಗಿ, ಆಲಮೇಲ ಹಾಗೂ ಸಿಂದಗಿ ತಾಲೂಕಿನ ಪಿಡಿಒ, ಕಾರ್ಯದರ್ಶಿಗಳು, ಕಂಪ್ಯೂಟರ್ ಆಪರೇಟರ್‌ಗಳು, ಬಿಲ್ ಕಲೆಕ್ಟರ್‌ಗಳು ಮತ್ತು ಸಿಬ್ಬಂದಿಗಳು ಇದ್ದರು.