ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಜೈನಾಪುರ ಗ್ರಾಮದ ೧೮ರ ವಯಸ್ಕ ಸಂತೋಷ ತೊಂಡಿಹಾಳ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಿಂದ ಮುದ್ದೇಬಿಹಾಳದ ಕಾಲೇಜಿಗೆ ಹೋಗಿ ಬರುವದಾಗಿ ಹೇಳಿ ಹೋದವನು ಮರಳಿ ಮನೆಗೆ ಬಾರದೇ ಮೊಬೈಲ್ ಫೋನ್ ಸ್ವಿಷ್ ಆಫ್ ಮಾಡಿಕೊಂಡು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಈತನನ್ನು ಹುಡುಕಿ ಕೊಡಬೇಕು ಎಂದು ಸಂತೋಷನ ತಾಯಿ ಶಾಂತವ್ವ ತೊಂಡಿಹಾಳ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
