ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಹಿಳಾ ಮತ್ತು ಪುರುಷರ ವಿಭಾಗದ ಸೈಕ್ಲಿಂಗ್ ಆಯ್ಕೆ ಪ್ರಕ್ರಿಯೆ ಜರುಗಿತು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಸೈಕ್ಲಿಂಗ್ ಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ೬ ಜನರನ್ನೊಳಗೊಂಡ ೧ ಪುರುಷ ತಂಡ ಹಾಗೂ ೬ ಜನ ಮಹಿಳೆಯರನ್ನೊಳಗೊಂಡ ೧ ಮಹಿಳಾ ತಂಡವನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯ ಉಪ ಪ್ರಾಚಾರ್ಯ ಡಾ.ಅನಿಲ ಬಿ ನಾಯಕ, ಐಕ್ಯೂಎಸಿ ಸಂಯೋಜಕ ಡಾ.ಪಿ. ಎಸ್. ಪಾಟೀಲ, , ದೈಹಿಕ ನಿರ್ದೆಶಕ ಎಸ್.ಕೆ.ಪಾಟೀಲ, ದಿಲೀಪಗೌಡ ಪಾಟೀಲ, ಶಶಿಧರ ಹೆರಲಗಿ, ಎಂ. ಪಿ. ಕುಪ್ಪಿ, ಅಲ್ಕಾ ಪಡತಾರೆ, ಶಿರಹಟ್ಟಿ ಮತ್ತಿತರರು ಇದ್ದರು.

