ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರೂಪಾಯಿಗೆ ೮೦ ರೂಪಾಯಿ ನೀಡುವ ಕರಾರಿನ ಮೇರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಓಸಿ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ತಾಲೂಕಿನ ನೇಬಗೇರಿ ಗ್ರಾಮದ ಕುಮಾರ ಬಾಬು ಚವ್ಹಾಣ ಪಟ್ಟಣದ ಬಸ್ ನಿಲ್ದಾಣ ಬಳಿ ಮತ್ತು ತಾಲೂಕಿನ ನಾಲತವಾಡದ ನಾಡಗೌಡರ ಓಣಿಯ ರಮೇಶ ಬಸಪ್ಪ ಭಜಂತ್ರಿ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿ ಹೀಗೆ ಇಬ್ಬರೂ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕಿದ್ದು ಇವರಿಂದ ಕೆಲ ಹಣ, ಓಸಿ ಚೀಟಿ ಮತ್ತು ಬಾಲ್ ಪೆನ್ನುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
