ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇಂಡಿ ತಾಲೂಕಿನ ಆರ್.ಎಂ.ಶಹಾ ಸಿ.ಬಿ.ಎಸ್.ಇ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ದಿನಾಂಕ- ೦೫-೦೧-೨೦೨೫ರಂದು ಬೆಳಿಗ್ಗೆ ೯.೩೦ ರಿಂದ ೪.೩೦ರವರೆಗೆ ಬೋಧಕ/ಭೋಧಕೇತರ ಹುದ್ದೆಗಳಿಗಾಗಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಬಿ.ಎ, ಎಂ.ಎ, ಬಿಸಿಎ, ಎಂಎಸ್ಸಿ, ಡಿ.ಇಡಿ, ಬಿ.ಇಡಿ, ಬಿ.ಎಸ್ಸಿ, ಎಂ.ಎಸ್ಸಿ, ಹಿಂದಿ ಬಿ.ಇಡಿ, ಬಿ.ಪಿ.ಇಡಿ, ಡಿಗ್ರಿ ಇನ್ ಯೋಗಾ, ಲೈಬ್ರರಿಯನ್, ಎನ್ ಟಿಟಿಸಿ, ಮೌಂಟೆಷರಿ ಹಾಗೂ ಬೋಧಕೇತರ ಹುದ್ದೆಗಳಾದ ವಾರ್ಡನ್ ಮತ್ತು ಕ್ಲರ್ಕಗೆ ಪದವಿ ವಿದ್ಯಾರ್ಹತೆಯುಳ್ಳ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು, ಹೆಚ್ಚಿನ ಮಾಹಿತಿಗಾಗಿ ಮೊ: ೭೭೯೫೩೨೪೧೭೦/ ೯೯೪೫೦೦೦೭೯೩ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
