ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಮೃತ್ ಮಿತ್ರ ೨.೦ ಅಭಿಯಾನದಡಿ ತಾಂತ್ರಿಕೇತರ ಚಟುವಟಿಕೆ ಕಾರ್ಯಕ್ರಮಗಳಿಗೆ ಮಹಿಳಾ ಸ್ವ-ಸಹಾಯ ಸಂಘಗಳಿAದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವ ಸ್ವ-ಸಹಾಯ ಸಂಘ ಡೇ-ನಲ್ಮ್ ಯೋಜನೆಯ ಪಂಚಸೂತ್ರ ಅನುಸರಿಸುತ್ತಿರಬೇಕು. ಸಂಘದ ಕನಿಷ್ಠ ಒಬ್ಬ ಸದಸ್ಯ ೮ನೇ ತರಗತಿ ಶಿಕ್ಷಣ ಹಾಗೂ ಡಿಜಿಟಲ್ ಸಾಕ್ಷರತೆ ಹೊಂದಿರಬೇಕು. ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ಇರಬೇಕು. ಸಂಘ ಯಾವುದೇ ಅಪರಾಧ ಅಥವಾ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರಬಾರದು. ವಾರ್ಡ್ ಮಟ್ಟದಲ್ಲಿ ಕೆಲಸ ಮಾಡುವ ಸ್ವ-ಸಹಾಯ ಗುಂಪಿಗೆ ಆದ್ಯತೆ ನೀಡಲಾಗುವುದು.
ಆಸಕ್ತ ಸ್ವ-ಸಹಾಯ ಸಂಘಗಳು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿ ಡೇ-ನಲ್ಮ್ ಶಾಖೆಗೆ ಭೇಟಿ ನೀಡಿ, ಕಾರ್ಯಾಲಯದಿಂದ ಅರ್ಜಿ ನಮೂನೆ ಪಡೆದು ಜನವರಿ- ೦೭-೦೧-೨೦೨೫ರ ಒಳಗಾಗಿ ತಮ್ಮ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
