ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಖೋ-ಖೋ ಕ್ರೀಡಾಪಟುಗಳು ೨೦೨೪-೨೫ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಆಯ್ಕೆಯಾಗಿದ್ದು, ಇದೇ ದಿ. ೨೮/೧೨/೨೦೨೪ ರಿಂದ ೩೧/೧೨/೨೦೨೪ರ ರವರೆಗೆ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಕ್ರೀಡೆ ಜರುಗಲಿದೆ. ಸದರಿ ಕ್ರೀಡಾಕೂಟದಲ್ಲಿ ಮಹಿಳಾ ವಿವಿಯ ಖೋ-ಖೋ ಕ್ರೀಡಾಪಟುಗಳು, ತಂಡದ ತರಬೇತಿದಾರಾಗಿ ಮಂಜಪ್ಪ ಸಿ.ಎಸ್ ಮತ್ತು ವ್ಯವಸ್ಥಾಪಕರಾಗಿ ಮಹಾಂತೇಶ ಎಲ್. ಭಾಗವಹಿಸಲಿದ್ದಾರೆ.
ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ಣ ಶುಭ ಹಾರೈಸಿದ್ದಾರೆ.

