ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಜಿಗಜೇವಣಿ ಗ್ರಾಮದ ಗದ್ಯಾಳ ವಸ್ತಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಲ್ಲಪ್ಪ ಶಿವಪ್ಪ ವಾಘಮೋರೆ ಇವರನ್ನು ‘ಸರಸ್ವತಿ ಸಾಧಕಸಿರಿ ರಾಷ್ಟ್ರ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಮಲ್ಲಪ್ಪ ಅವರು ಶಿಕ್ಷಕರಾಗಿ ಕಳೆದ 24 ವರ್ಷಗಳಿಂದ ಅಕ್ಷರದ ಜ್ಞಾನಾರ್ಜನೆಯನ್ನು ಮಕ್ಕಳಿಗೆ ನೀಡುತ್ತಾ ಬಂದಿರುವುದನ್ನು ಗುರುತಿಸಿ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ದಾವಣಗೆರೆ ಇವರು ದಾವಣಗೆರೆ ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ 2025 ರ ಎಪ್ರಿಲ್ 27(ಭಾನುವಾರ)ದಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ನಾಗೇಶ್ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.