ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರದ ಸರ್ವೋನ್ನತ ಉನ್ನತಿಗಾಗಿ ಜೀವನವನ್ನೇ ಸಮರ್ಪಿಸಿದ ಮಹಾನ್ ನಾಯಕರು ನಮ್ಮ ಹೆಮ್ಮೆಯ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಅಭಿಪ್ರಾಯ ಪಟ್ಟರು.
ನಗರದ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ಬುಧವಾರ ಭಾರತ ದೇಶದ ಮಾಜಿ ಪ್ರಧಾನಮಂತ್ರಿಗಳು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ರವರ 100ನೇ ಜನ್ಮದಿನೋತ್ಸವ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ವಾಜಪೇಯಿ ಅವರು ರಾಷ್ಟ್ರ ಕಂಡ ಅಪ್ರತಿಮ ವಾಕ್ಪಟು, ಅಜಾತುಶತ್ರು, ದೇಶದ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಬದಲಾವಣೆ ತಂದಿರುವ ಅವರು, ಅಭಿವೃದ್ಧಿ ಮೂಲಕ ದೇಶದ ಚಿತ್ರಣವನ್ನೇ ಬದಲಿಸಿದ್ದಾರೆ. ಭಾರತೀಯ ಜನತಾ ಪಾರ್ಟಿಗೆ ಹಾಗೂ ದೇಶ ಭಕ್ತರಿಗೆ ಬಹಳ ಅಭಿಮಾನ ಪಡುವ ಹೆಮ್ಮೆಯ ದಿವಸ ಅಟಲ್ ಜಿ ಜನ್ಮ ದಿನ. ಅವರು ನೀಡಿರುವ ಅತ್ಯುತ್ತಮ ಆಡಳಿತಕ್ಕಾಗಿ, ಜನ್ಮ ದಿನವನ್ನು ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಸಾರ್ವಜನಿಕರ ಅಹವಾಲು ಆಲಿಸಿದರು. ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಸದಾಶಿವ ಗುಡ್ಡೋಡಗಿ, ರಾಜೇಶ ದೇವಗಿರಿ, ಮಲಕಪ್ಪ ಗಾಣಿಗೇರ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಸಂತೋಷ ಪಾಟೀಲ, ಚಂದ್ರು ಚೌದರಿ, ದತ್ತಾ ಗೊಲಾಂಡೆ, ಬಸವರಾಜ ಗೊಳಸಂಗಿ, ಸಂತೋಷ ತಳಕೇರಿ, ಪ್ರಕಾಶ ಚವ್ಹಾಣ, ರಾಜಲಕ್ಷ್ಮೀ ಪರ್ವತ್ತನವರ, ಶಕುಂತಲಾ ಕುರ್ಲೆ, ಭಾರತಿ ಶಿವಣಗಿ, ಬಸವರಾಜ ಲವಗಿ, ವಿಜು ಗಜ್ಜಿನಕಟ್ಟಿ, ಮೋಯಿನ್ ಗೋಲೆವಾಲೆ, ಉಮೇಶ ವೀರಕರ, ರಮೇಶ ಪಡಸಲಗಿ, ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ವ್ಯಾಪಾರಸ್ಥರು, ಮಹಿಳೆಯರು, ನಾಗರಿಕರು ಉಪಸ್ಥಿತರಿದ್ದರು.