ಮುದ್ದೇಬಿಹಾಳ: ಹೆರಿಗೆ ಆಸ್ಪತ್ರೆ ಕಟ್ಟುವದಾಗಿ ಹೇಳಿ ಸಿದ್ಧಗಂಗಾ ಶ್ರೀಗಳನ್ನು ಕರೆತಂದು ಅಡಿಗಲ್ಲು ಸಮಾರಂಭ ಮಾಡಿ ಅದೇ ಜಾಗದಲ್ಲಿ ಬಂಗ್ಲೋ ಕಟ್ಟಿಕೊಂಡು ಕೋಳಿ, ಕುರಿ, ಶೆರೆ ಕೊಟ್ಟು ಯುವಕರನ್ನು ಹಾಳು ಮಾಡುತ್ತಿರುವ ಇವರಿಗೆ ಪಾಪ ಸುತ್ತಿಕೊಳ್ಳದೇ ಬಿಡದು ಎಂದು ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಕಟುವಾಗಿ ಟೀಕಿಸಿದರು.
ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸಿ ಅವರು ಮಾತನಾಡಿದರು.
ಭ್ರಷ್ಟರ ಕೈಯಲ್ಲಿ ಸರ್ಕಾರ ಕೊಟ್ಟರೆ ಭಷ್ಟಾಚಾರ ಬಿಟ್ಟರೆ ಏನೂ ಮಾಡಲು ಸಾಧ್ಯವಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿ ಅದೇ ಹಣದಿಂದ ಸಧ್ಯ ಚುನಾವಣೆ ನಡೆಸುತ್ತಿದ್ದಾರೆ. ನಮ್ಮ ಜನಕ್ಕೆ ಹಣ ಹೆಂಡ ಕೊಟ್ಟರೆ ಇವರಿಗೆ ಮತ ನೀಡುತ್ತಾರೆ ಎಂದುಕೊAಡಿದ್ದಾರೆ. ನಮ್ಮ ಜನರ ನಾಡಿ ಮಿಡಿತ ನನಗೆ ಗೊತ್ತು. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಯಾರನ್ನೂ ಕ್ಷಮಿಸುವದಿಲ್ಲ. ಈ ಬಾರಿ ನನ್ನನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಈಗಾಗಲೇ ತೀರ್ಮಾನಿಸಿಬಿಟ್ಟಿದ್ದಾರೆ ಎಂದರು.
ಇದು ನನ್ನ ಕೊನೆಯ ಚುನಾವಣೆ. ನಾನು ಈ ಬಾರಿ ಮಂತ್ರಿಯಾಗುವುದು ಪಕ್ಕಾ. ಅಧಿಕಾರ ಹಿಡಿದ ಕೆಲವೇ ದಿನಗಳಲ್ಲಿ ಅಭಿವೃದ್ಧಿ ಅಂದರೇನು? ಒಮ್ಮೆ ಮಾಡಿದ ಅಭಿವೃದ್ಧಿ ಕಾಮಗಾರಿಗಳಿಂದ ನಮ್ಮ ಜನ ಎಷ್ಟು ವರ್ಷಗಳ ಕಾಲ ನೆಮ್ಮದಿಯ ಜೀವನ ನಡೆಸುತ್ತಾರೆ ಎಂದು ತೋರಿಸಿಕೊಡುತ್ತೇನೆ. ಕೇವಲ ಸಿಸಿರಸ್ತೆಗಳನ್ನು ಮಾಡಿ ಜಂಭ ಕೊಚ್ಚಿಕೊಳ್ಳುವವರಿಗೆ ಅಭಿವೃದ್ಧಿಯ ನಿಜವಾದ ಅರ್ಥ ತಿಳಿಸುತ್ತೇನೆ ಎಂದರು.
ಮುಖAಡರಾದ ಶಾಂತಗೌಡ ಪಾಟೀಲ ನಡಹಳ್ಳಿ, ಶಂಕರಗೌಡ ಹಿರೇಗೌಡರ, ರಾಜೇಂದ್ರಗೌಡ ರಾಯಗೊಂಡ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ವೆಂಕನಗೌಡ ಪಾಟೀಲ, ಪುರಸಭೆ ಮಾಜಿ ಸದಸ್ಯರಾದ ಕಾಮರಾಜ ಬಿರಾದಾರ, ಮುತ್ತಣ್ಣ ರಾಯಗೊಂಡ, ಪಿಂಟು ಸಾಲಿಮನಿ, ನಿವೃತ್ತ ಯೋಧ ಗುರುರಾಜಸ್ವಾಮಿ, ನ್ಯಾಯವಾದಿಗಳಾದ ಎನ್.ಆರ್.ಮೊಕಾಶಿ, ಶ್ರವಣಕುಮಾರ ಕಡಿ ಮತ್ತಿತರರು ಮಾತನಾಡಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ನಿವೃತ್ತ ಡಿಎಸ್ಪಿ ಎಸ್.ಎಸ್.ಹುಲ್ಲೂರ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ, ಬಾಪೂರಾವ್ ದೇಸಾಯಿ, ಅಬ್ದುಲಗಫಾರ್ ಮಕಾನದಾರ, ಎಚ್.ಆರ್.ಬಾಗವಾನ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
ಸಿಸಿರಸ್ತೆ ಮಾಡಿ ಬೆನ್ನು ತಟ್ಟಿಕೊಳ್ಳುವವರಿಗೆ ಅಭಿವೃದ್ಧಿಯ ನಿಜ ಅರ್ಥ ತಿಳಿಸುವೆ :ನಾಡಗೌಡ
Related Posts
Add A Comment