ಮುದ್ದೇಬಿಹಾಳ: ಹಿಂದೂ ಧರ್ಮದಲ್ಲಿ ಪದ್ಧತಿಗಳು ಬಹಳ ಇವೆ. ಆ ಪದ್ಧತಿಗಳನ್ನು ಕಲಿಸಲೆಂದೇ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಪಟ್ಟಣದ ಜಂಗಮ ಗೆಳೆಯರ ಬಳಗದಿಂದ ಹತ್ತು ದಿನಗಳ ಕಾಲ ವೇದ ಅಧ್ಯಯನದ ಶಿಬಿರ ಏರ್ಪಡಿಸಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಹಿರೂನಿನ ಜಯಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದ ಧಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜನನದಿಂದ ಮರಣದವರೆಗೆ ಬರುವ ಎಲ್ಲ ತರಹದ ಪೂಜಾ ಕಾರ್ಯಕ್ರಮಗಳಲ್ಲಿ ಪುರೋಹಿತ ಅಥವಾ ಶಾಸ್ತಿçಗಳಾಗಿ ಜೀವನ ನಡೆಸುವದಕ್ಕೆ ಇಂತಹ ಶಿಬಿರಗಳು ನೆರವಾಗಲಿವೆ. ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಶಿಬಿರಗಳನ್ನು ಗೆಳೆಯರ ಬಳಗ ನಡೆಸಲಿ ಎಂದರು.
ಢವಳಗಿ ಗದ್ದುಗೆಮಠದ ಘನಮಠ ಶ್ರೀಗಳು ಮಾತನಾಡಿ, ಮಕ್ಕಳು ಸಮಾಜಮುಖಿಯಾಗಿ ಬೆಳೆಯಲು ಈಗಿನ ಕಾಲಘಟ್ಟದಲ್ಲಿ ಮಕ್ಕಳಿಗಿಂತ ಮೊದಲು ಅವರ ತಂದೆ ತಾಯಿಗೆ ಸಂಸ್ಕಾರ ಕೊಡಬೇಕಾದ ಅಗತ್ಯವಿದೆ. ಸಧ್ಯದ ದಿನಮಾನಗಳಲ್ಲಿ ಜಂಗಮರೆAದರೆ ಕೊರಳಲ್ಲಿ ಲಿಂಗವಿರುವುದಿಲ್ಲ. ಮತ್ತೊಬ್ಬರಿಗೆ ಉಪದೇಶ ಮಾಡುವ ಮುನ್ನ ನಮ್ಮಲ್ಲಿ ಸಂಸ್ಕಾರವಿದೆಯೇ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
ಗುAಡಕನಾಳದ ಗುರುಲಿಂಗ ಶಿವಾಚಾರ್ಯರು, ವೇ.ಸಿದ್ಧಲಿAಗಯ್ಯ ಶಾಸ್ತಿçÃಗಳು ಹಿರೇಮಠ, ಶಿಕ್ಷಕ ಬಾಬು ಹಿರೇಮಠ ಮಾತನಾಡಿದರು.
ಹತ್ತು ದಿನಗಳ ಕಾಲ ೬೫ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೇದ, ಆಗಮ ಹಾಗೂ ಮಂತ್ರಗಳ ಉಚ್ಛಾರಣೆ ಸೇರಿದಂತೆ ವೈದಿಕ ಸಂಸ್ಕಾರದ ತರಬೇತಿ ನೀಡಿದ ವೇ.ಸಿದ್ಧಲಿಂಗಯ್ಯ ಶಾಸ್ತಿçà ಹಿರೇಮಠ ಅವರನ್ನು ಜಂಗಮ ಗೆಳೆಯರ ಬಳಗದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಶಿಬಿರದ ಯಶಸ್ವಿಗೆ ಶ್ರಮಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.
ಉದ್ಯಮಿ ಟಿ.ವಿಜಯಭಾಸ್ಕರ್, ಜಂಗಮ ಸಮಾಜದ ಮಾಜಿ ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ, ಸಂಗಯ್ಯ ಶಾಸ್ತಿçÃಗಳು, ಮಹದೇವಯ್ಯ ಶಾಸ್ತಿçÃಗಳು, ಪ್ರಮುಖರಾದ ಆನಂದ ಶಿವಯೋಗಿಮಠ, ಸದಾಶಿವ ಮಠ, ಎನ್.ಎಸ್.ರಾಮಗಿರಿಮಠ, ಶಿವಾನಂದ ಹಿರೇಮಠ, ಸುರೇಶ ಹಿರೇಮಠ, ಮಹೇಶ ಕಲ್ಯಾಣಮಠ, ಶರಣಯ್ಯ ಹಿರೇಮಠ, ಶಂಕರ್ ಸಾಲಿಮಠ, ರಾಚಯ್ಯ ಹಿರೇಮಠ, ಶಂಕರ ಶಿವಯೋಗಿಮಠ, ಮುತ್ತಣ್ಣ ನಿಲುವಂಗಿಮಠ, ಅರವಿಂದ ಲದ್ದಿಮಠ ಸೇರಿದಂತೆ ಮತ್ತಿತರರು ಇದ್ದರು.
ಸಿದ್ದು ಮಠ, ಮಣಿಕಂಠ ಹಿರೇಮಠ ಪ್ರಾರ್ಥಿಸಿದರು. ಎನ್.ಎಸ್.ಹಿರೇಮಠ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment