ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸುಪರ್ ಸ್ಪೇಶಾಲಿಟಿ ಆಸ್ಪತ್ರೆಗೆ ವಿಜಯಪುರ ರೋಟರಿ ಕ್ಲಬ್ ಉತ್ತರ ವತಿಯಿಂದ ನೀಡಲಾದ ಡೆಡ್ ಬಾಡಿ ಪ್ರಿಜರ್ ರನ್ನು ಜೆ.ಎಸ್.ಎಸ್ ಆಸ್ಪತ್ರೆ ಅಧ್ಯಕ್ಷರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಹಾಗೂ ಸಿಇಒ ಡಾ.ಶರಣ ಮಳಖೇಡ್ಕರ್ ರವರು ಈಚೆಗೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳಾದ ಡಾ.ಪ್ರಾಣೇಶ ಜಾಗಿರದಾರ, ಡಾ.ಶ್ರೀಪಾದ ಕುಲಕರ್ಣಿ, ದೀಲಿಪಕುಮಾರ ಪೂಜಾರಿ, ಡಾ.ಅಶೋಕ ವಾಲಿ, ಸುಹರ್ಷ ಶಾಹ, ರವಿ ಶಿಲ್ಲೇದಾರ, ಬಸವರಾಜ ಸೊನ್ನದ, ದಿಲೀಪ ತಾಳಿಕೋಟಿ, ಗುರುಶಾಂತ ನಿಡೋಣಿ, ಡಿ.ಎಸ್.ಪಾಟೀಲ ಮತ್ತಿತರರು ಇದ್ದರು.

