ಮುಳಸಾವಳಗಿಯಲ್ಲಿ ಜರುಗಿದ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ ಕರೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಕಾರ್ಯಕರ್ತರು ಸಂಘಟನೆಯೊಂದಿಗೆ ಸನ್ನದ್ಧರಾಗಬೇಕು ಎಂದು ಖ್ಯಾತ ನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಮುಳಸಾವಳಗಿ ಗ್ರಾಮದಲ್ಲಿ ಗುರುವಾರ ಜರುಗಿದ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪಕ್ಷ ಬಲ ಪಡಿಸಲು ಕಾರ್ಯಕರ್ತರ ಶ್ರಮ ಅಗತ್ಯವಾಗಿದೆ. ಪಕ್ಷದ ಬಲವರ್ಧನೆ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯದಲ್ಲಿ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಡಿಎಸ್ಎಸ್ ತಾಲ್ಲೂಕು ಸಂಚಾಲಕ ರಾಜಕುಮಾರ ಸಿಂದಗೇರಿ, ಮಾತನಾಡಿ, ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಯುತವಾಗಿದ್ದು, ಕಾರ್ಯಕರ್ತರು ಉತ್ಸಾಹದಿಂದ ಕಾರ್ಯನಿರ್ವಹಿಸಿದಲ್ಲಿ ಮುಂಬರುವ ಚುನಾವಣೆಗಳಲ್ಲಿ ಜಯ ನಿಶ್ಚಿತ. ಈಗಾಗಲೇ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಕಾರ್ಯಕರ್ತರ ಪಡೆಯೊಂದಿಗೆ ಜಾಗೃತಿ ಆರಂಭಿಸಿದ್ದು ನಿಶ್ಚಯವಾಗಿಯೂ ಇದು ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದರು.
ಸುರೇಶಗೌಡ ಬಿರಾದಾರ(ಚಿಕ್ಕರೂಗಿ), ಶಂಕರಗೌಡ ಪಾಟೀಲ(ಯರನಾಳ), ಶ್ರೀಕಾಂತ ರಾಠೋಡ, ಲಲಿತಾ ದೊಡಮನಿ, ಮುರ್ತುಜಾ ತಾಂಬೋಳಿ, ರಾಜಶೇಖರ ಕೋಣಶಿರಸಗಿ, ಮಲ್ಲಿಕಾರ್ಜುನ ಬಸವರೆಡ್ಡಿ, ಅಡಿವೆಪ್ಪ ಕೊಂಡಗೂಳಿ, ತಿಪ್ಪಣ್ಣ ಮೂಲಿಮನಿ, ಬಸವರಾಜ ಇಂಗಳಗಿ ಸುಭಾಸ್ ಹೊಸಟ್ಟಿ, ನೀಲಪ್ಪ ನಾಟಿಕಾರ, ಬಸವರಾಜ ಇಮ್ಮನ, ಸಾಯಬಣ್ಣ ಸೊನ್ನಳ್ಳಿ, ಮಲಕಪ್ಪ ನಾಯ್ಕೋಡಿ, ರಮೇಶ ದಳವಾಯಿ, ಸೇರಿದಂತೆ ವಿವಿಧ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

