ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಗವದ್ಗೀತೆಯಲ್ಲಿ ಆಧ್ಯಾತ್ಮ, ಮನ:ಶಾಸ್ತ್ರ, ನೀತಿ ಶಾಸ್ತ್ರ, ಆರೋಗ್ಯ ವಿಜ್ಞಾನ ಹೀಗೆ ಎಲ್ಲಾ ಜ್ಞಾನಗಳು ಅಡಗಿವೆ ಎಂದು ಶಿಕ್ಷಕ ಸುಖದೇವ ಹಂಜಗಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ ಸಂಬಂಧಿ ಶ್ಲೋಕ ಪಠಣ ಕೇಂದ್ರದಲ್ಲಿ ಅವರು ಮಾತನಾಡಿದರು.
ಭಗವದ್ಗೀತೆಯ ಎಲ್ಲ ಅಧ್ಯಾಯಗಳನ್ನು ಓದಿಕೊಂಡು ಅದರಲ್ಲಿನ ಜ್ಞಾನವನ್ನು ನಮ್ಮಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಭವಿಷ್ಯ ಉಜ್ವಲವಾಗುವದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಈ ವೇಳೆ ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ, ಪ್ರಶಿಕ್ಷಕಿ ರಂಜಿತಾ ಹೆಗಡೆ, ಮಂಜುನಾಥ ಪಡದಾಳಿ, ವಿನಾಯಕ ನಾಗರಾಳ, ರೂಪಾ ನಾಟಿಕರ್, ಅನ್ನಪೂರ್ಣ ನಾಗರಾಳ, ಗುರುಬಾಯಿ ತಂಗಡಗಿ, ಭಾಗ್ಯ ಸಿದ್ದಾಪೂರ, ಮೀನಾಕ್ಷಿ ಗಣಚಾರಿ, ಅನ್ನಪೂರ್ಣ ಹೊಸಮನಿ ಸೇರಿದಂತೆ ಇತರರು ಇದ್ದರು.

