ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಸನ್ಮಾನ ಸ್ವೀಕರಿಸಿದ ತಾಲೂಕು ಜಾನಪದ ಪರಿಷತ್ ನ ಅಧ್ಯಕ್ಷ ಎ.ಆರ್.ಮುಲ್ಲಾ ಅವರಿಗೆ ವಿವಿಧಪರ ಸಂಘಟನೆಗಳಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ರೈತ ಸಂಘದ ಸಂಗಣ್ಣ ಬಾಗೇವಾಡಿ, ಸಾಹಿತಿ ಪ್ರೊ.ಪ್ರಕಾಶ ನರಗುಂದ, ಪ್ರೊ.ಎಸ್.ಕೆ.ಹರನಾಳ, ಮುಖ್ಯಗುರುಗಳಾದ ಟಿ.ಎನ್.ರೂಢಗಿ, ಎಲ್.ಎಂ.ಚಲವಾದಿ, ಕಜಾಪ ಖಜಾಂಚಿ ಎಸ್.ವಾಯ್.ವಗ್ಗರ, ಸದಸ್ಯ ಬಸವರಾಜ ಹರನಾಳ, ಎಂ.ಪಿ.ವಾಳದವರ ಸೇರಿದಂತೆ ಇತರರು ಇದ್ದರು.

