ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ | ೭೬ ನೇ ಎನ್‌ಸಿಸಿ ರೈಸಿಂಗ್ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ.ತಮ್ಮಲ್ಲಿ ಮೊದಲು ಶಿಸ್ತುನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ವಿಜಯಪುರದ ೩೬ ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಗಿರೀಷ್ ಶಿಂಧೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ,ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಅಂಜುಮನ್ ಪದವಿ ಕಾಲೇಜು, ಎಸ್.ಎಸ್ ಪಿಯು ಕಾಲೇಜು, ಬಿ.ಎಲ್.ಡಿ.ಇ ವಿದ್ಯಾರ್ಥಿನಿಯರ ಹೈ ಸ್ಕೂಲ್ ಮತ್ತು ವಿಜಯಪುರದ ೩೬ ಕರ್ನಾಟಕ ಬಟಾಲಿಯನ್ ಎನ್‌ಸಿಸಿ ಸಂಯೋಜನೆಯಡಿಯಲ್ಲಿನ ಎನ್ ಸಿ ಸಿ ೭೬ ನೇ ರೈಸಿಂಗ್ ದಿನಾಚರಣೆ ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಾವು ಗುರಿ ಮುಟ್ಟಬೇಕೆಂದರೆ ತಮ್ಮಲ್ಲಿ ಮೊದಲು ತಮ್ಮಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ತಮ್ಮ ಕೆಲಸ ಕಾರ್ಯಗಳನ್ನು ತಾವೇ ಮಾಡಿಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಸಮಯ ಪ್ರಜ್ಞೆ ಮತ್ತು ಶಿಸ್ತು ಬೆಳೆಯುತ್ತದೆ ಎಂದು ಹೇಳಿದರು.
ಗುರಿ ಮುಟ್ಟುವ ಸಲುವಾಗಿ ಹೊರಡುತ್ತಿರುವಾಗ , ಅಭ್ಯಾಸ ಮಾಡುವಾಗ ಬಹಳಷ್ಟು ಗೆಳೆಯರನ್ನು ಕಳೆದುಕೊಳ್ಳಬಹುದು ಬಹಳಷ್ಟು ಸಂಬಂಧಿಕರ ಸಂಪರ್ಕ ಕಡಿಮೆಯಾಗಬಹುದು ಆದರೆ ಅದರಕಡೆಗೆ ಗಮನ ಕೊಡದೆ ನಮ್ಮ ದೃಷಿಕೋನ ಶ್ರದ್ದೆಯಿಂದ ಕೆಲಸ ಮಾಡಬೇಕು,ಮಕ್ಕಳಿಗೆ ಜೀವದ ಹಾಗೂ ಜೀವನದ ಮೌಲ್ಯಗಳನ್ನು ಬಗ್ಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಮೇಜರ್ ಡಾ.ಪಿ.ಡಿ.ನೀಡಿಗಿ ಮಾತನಾಡಿದರು
ಈ ಸಂದರ್ಭದಲ್ಲಿ ಪ್ರಾಚಾರ್ಯರ ಮಹಾವಿದ್ಯಾಲಯದ ಡಾ. ಆರ್.ಎಂ.ಮಿರ್ದೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾಳೆಯ ಪ್ರಜೆಗಳು ಅದರಂತೆ ಮುಂದಿನ ಉತ್ತಮ ಸಮಾಜ ಕಟ್ಟುವಲ್ಲಿ ಇಂದಿನ ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ನಿಮ್ಮ ಶಿಸ್ತು,ಸಂಯಮವನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ರೈಸಿಂಗ್ ದಿನಾಚರಣೆ ಹಿನ್ನೆಲೆ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಯಿತು. ಅಲ್ಲದೆ ಮಹಾವಿದ್ಯಾಲಯದ ಆವಣದಲ್ಲಿ ಸಸಿಯನ್ನು ನೆಡಲಾಯಿತು.
ಈ ಸಂದರ್ಭದಲ್ಲಿ,ನಿವೃತ್ತ ಪ್ರಾದ್ಯಾಪಕರು ಮೇಜರ್ ಡಾ.ಪಿ.ಡಿ.ನೇಡಗಿ, ಕ್ಯಾಪ್ಟನ್ ಎಸ್.ಎ.ಪಾಟೀಲ,ಕ್ಯಾಪ್ಟನ್ ಎಂ.ಬಿ.ಕನ್ನೂರ, ಸುಬೇದಾರ ಪ್ರಮೋದ,ಮಹಾವಿದ್ಯಾಲಯದ ಎನ್‌ಸಿಸಿ ಅಧಿಕಾರಿಗಳಾದ ಡಾ.ರಾಮಚಂದ್ರ ನಾಯಕ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ಎನ್‌ಸಿಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

