ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಭಕ್ತಶ್ರೇಷ್ಠ ಕನಕದಾಸರ ತತ್ವಾದರ್ಶಗಳು ಎಲ್ಲರಿಗೂ ಸದಾ ದಾರಿದೀಪವಾಗಿವೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಸೋಮವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಕನಕದಾಸ ಭಾವಚಿತ್ರಕ್ಕೆ ಪೂಜೆ ಪುಷ್ಪಾರ್ಚನೆ ಮೂಲಕ ನಮನ ಸಲ್ಲಿಸಿದ ಬಳಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. .
ಭಕ್ತಿ ಪಂಥದ ಕಾಲದಲ್ಲಿ ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಮುಂಚೂಣಿಯಲ್ಲಿದ್ದರು. ಕನ್ನಡ ಸಾಹಿತ್ಯದ ಮೂಲಕ ಅವರು ಜಾತಿ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಕನಕದಾಸರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಅವರಿಗೆ ಸರ್ವ ಸಮುದಾಯಗಳಲ್ಲಿ ಭಕ್ತರಿದ್ದಾರೆ. ಇಂಥ ಮಹಾನ್ ಸಂತರ ಬಗ್ಗೆ ನಾವೆಲ್ಲರೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಅವರ ತತ್ವಗಳು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸುವ ಕೆಲಸ ಮಾಡಬೇಕಿದೆ ಎಂದು ಸುನೀಲಗೌಡ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಬಬಲಾದಿಯ ಶ್ರೀ ಅಪ್ಪಾಜಿ ಹಿರೇಮಠ, ಮುಖಂಡರಾದ ಬಸವರಾಜ ಲೋಕುರಿ, ವಿ. ಎಸ್. ಪಾಟೀಲ, ಈರಗೊಂಡ ಬಿರಾದಾರ, ಸಿದ್ರಾಯ ಆಡಿನ, ಬಾಬು ಹಂಚಿನಾಳ, ಪ್ರಕಾಶ ಜಾಲಗೇರಿ, ಆನಂದ ಬೂದಿಹಾಳ ಭೀಮಸಿ ಭಜೇನಿ ಕೆಂಚಪ್ಪ ಉಳ್ಳಾಗಡ್ಡಿ ಸಾಬು ಉಳ್ಳಾಗಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೂ ಮುನ್ನ ಸುನೀಲಗೌಡ ಪಾಟೀಲ ಅವರು ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಕರೆಪ್ಪ ಉಗಾರ, ಎಂ. ಎಸ್. ಪಾಟೀಲ, ಪ್ರಕಾಶ ಉಗಾರ, ಪ್ರಮೋದ ಚಿಕರೆಡ್ಡಿ, ರುದ್ರಗೌಡ ಬಿರಾದಾರ, ಶ್ರೀಶೈಲ ಉಗಾರ, ಈಶ್ವರ ಲೋಕುರಿ, ಮುತ್ತು ಊಗಾರ, ಕರೆಪ್ಪ ತೊರವಿ, ಸಾಬು ಸೊರಡಿ, ಶಿವಪ್ಪ ತೊರವಿ ಮುಂತಾದವರು ಉಪಸ್ಥಿತರಿದ್ದರು.

