ಕನಕದಾಸರ ಕಂಚಿನ ಪ್ರತಿಮೆಗೆ ವೈಯಕ್ತಿಕ ೫ಲಕ್ಷ ರೂ. ದೇಣಿಗೆ ವಾಗ್ದಾನ ನೀಡಿದ ಶಾಸಕ ಮನಗೂಳಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಕ್ತಿ ಮಾರ್ಗದಿಂದ ಭಗವಂತನನ್ನು ಕಾಣಲು ಸಾಧ್ಯ ಎಂದು ತೋರಿಸಿಕೊಟ್ಟ ಭಕ್ತ ಕನಕದಾಸರನ್ನು ನೆನೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಪಟ್ಟಣದಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಶಾಸಕ ಆಶೋಕ ಮನಗೂಳಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಕ್ತಿ ಮಾರ್ಗದಿಂದ ದೇವರನ್ನು ಒಲಿಸಿಕೊಂಡ ಕನಕದಾಸರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ಆದರ್ಶ, ತತ್ವ ಸಿದ್ದಾಂತ, ಸಂದೇಶಗಳನ್ನು ಬದುಕಿನದುದ್ದಕ್ಕೂ ಅಳಚಡಿಸಿಕೊಳ್ಳಬೇಕು. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಮತ್ತು ಭಕ್ತಿಯ ಸಾಮ್ರಾಜ್ಯವನ್ನು ಕಟ್ಟಿದವರು ಕನಕದಾಸರು. ಸಂತರ, ಶರಣರ, ದಾರ್ಶನಿಕರ ತತ್ವ ಸಿದ್ದಾಂತಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯ ನಡೆಯಬೇಕು. ನಾಡಿನ ಹರಿದಾಸ ಪರಂಪರೆ ಬೆಳಗಿಸಲು ಕನಕದಾಸರು ಜಾತಿ-ಮತ, ಮೇಲು-ಕೀಳು ಭಾವನೆ ಬದಿಗೆ ಸರಿಸಿ ಭಕ್ತಿ ಪರಂಪರೆಯ ಮೂಲಕ ದಾಸ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ನೂತನವಾಗಿ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲು ನನ್ನ ವಯಕ್ತಿಕವಾಗಿ ೫ಲಕ್ಷ ರೂ. ನೀಡುತ್ತೇನೆ ಎಂದರು.
ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಸದಸ್ಯ ಹಾಸಿಂ ಆಳಂದ, ಸಂದೀಪ ಚೌರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರ, ಭೀಮು ವಾಲೀಕಾರ, ಶಾಂತೂ ರಾಣಾಗೋಳ, ಸಾಯಬಣ್ಣ ಪುರದಾಳ, ಸಿದ್ದು ಅಂಗಡಿ, ದಯಾನಂದ ಇವಣಿ ಸೇರಿದಂತೆ ಕನಕದಾಸರು ಅನುಯಾಯಿಗಳು, ಕುರುಬ ಸಮಾಜದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು

