ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದಲ್ಲಿ ಡಿಸೆಂಬರ್ 22 ರಂದು ಜರುಗಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ ಗೆ ನೋಂದಣಿ ಮಾಡಲು ನವೆಂಬರ್ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಕೂಡಲೇ ಓಟದಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಕೋಟಿ ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಸಿಗಳನ್ನು ನೆಟ್ಟು, ಮರಗಳನ್ನು ಬೆಳೆಸಲು ಪ್ರೋತ್ಸಾಹಿಸುವ ವಿಜಯಪುರ ಹಸಿರಿನ ಹಬ್ಬ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತ ಜನ ಜಾಗೃತಿ ಓಟದಲ್ಲಿ 18 ವಯಸ್ಸಿನ ಮೇಲ್ಪಟ್ಟ ಯುವಕರಿಂದ ವೃದ್ಧರಾಧಿಯಾಗಿ ಎಲ್ಲರೂ ನೋಂದಣಿ ಮಾಡಬಹುದಾಗಿದೆ. 5ಕಿ.ಮೀ, 10ಕಿ.ಮೀ, ಮತ್ತು 21ಕಿ.ಮೀ ಓಟದಲ್ಲಿ ಭಾಗವಹಿಸಲು ನೋಂದಣಿ ಮಾಡಬಹುದಾಗಿದೆ.
ಈ ಓಟವನ್ನು ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಸಮರ್ಪಿಸಲಾಗಿದ್ದು, ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಯುಳ್ಳ ಕಂಚಿನ ಪದಕ ನೀಡಲಾಗುವುದು. ಹಾಗೂ ಉತ್ತಮ ಗುಟಮಟ್ಟದ ಟಿ-ಶರ್ಟ್, ಓಟದ ಮಾರ್ಗದಲ್ಲಿ ಲಘು ಪಾನಿಯ ವ್ಯವಸ್ಥೆ ಮತ್ತು ಪೌಷ್ಟಿಕ ಉಪಹಾರದ ವ್ಯವಸ್ಥೆ ಇರುತ್ತದೆ. ಈ ಬಾರಿ 15 ಸಾವಿರ ಓಟಗಾರರು ಓಡುವ ನಿರೀಕ್ಷೆ ಇದ್ದು, ಕೊನೆಯ ಅವಕಾಶವನ್ನು ತಪ್ಪಿಸಿಕೊಳ್ಳದೇ ಕೂಡಲೆ https://vrukshathon.co.in/event/ ಲಿಂಕ್ ಮೂಲಕ ನೋಂದಣಿ ಮಾಡಿ. ಹೆಚ್ಚಿನ ಮಾಹಿತಿಗಾಗಿ ಡಾ. ರಾಜು ಯಲಗೊಂಡ-8095190218, ವೀರೇಂದ್ರ ಗುಚ್ಚಟ್ಟಿ- 9886668498 ಸಂಪರ್ಕಿಸಿ.
