ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ೧೫ನೇ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜಿಲ್ಲೆಯ ಕ್ರೀಡಾ ಶಾಲೆ-ನಿಲಯದ ಕ್ರೀಡಾಪಟುಗಳು ೦೨ ಬಂಗಾರ, ೦೩ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದು ಸಾಧನೆಗೈದಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ತಿಳಿಸಿದ್ದಾರೆ.
೧೪ ವರ್ಷ ವಯೋಮಿತಿಯ ೧೦ ಕಿ.ಮೀ. ವೈಯಕ್ತಿಕ ಟೈಮ್ ಟ್ರಾಯಲ್ಸ್ನಲ್ಲಿ ಕರಿಷ್ಮಾ ತಟಗಾರ ಬೆಳ್ಳಿ ಪದಕ, ೧೬ ವರ್ಷ ವಯೋಮಿತಿಯ ೧೫ ಕಿ.ಮೀ. ವೈಯಕ್ತಿಕ ಟೈಮ್ ಟ್ರಾಯಲ್ಸ್ನಲ್ಲಿ ಜ್ಯೋತಿ ರಾಠೋಡ ಬಂಗಾರ ಪದಕ, ಕೊಕಿಲಾ ಬೆಳ್ಳಿ ಪದಕ ಹಾಗೂ ದೀಪಿಕಾ ಫಡತರೆ ಕಂಚಿನ ಪದಕ, ೧೮ ವರ್ಷ ವಯೋಮಿತಿಯ ೨೦ ಕಿ.ಮೀ. ವೈಯಕ್ತಿಕ ಟೈಮ್ ಟ್ರಾಯಲ್ಸ್ನಲ್ಲಿ ಶ್ರೀಶೈಲ ವೀರಾಪುರ ಬಂಗಾರ ಹಾಗೂ ಶ್ರೀನಿವಾಸ ರಜಪೂತ ಬೆಳ್ಳಿ ಪದಕ ಪಡೆದಿದ್ದಾರೆ.
ಮುಂಬರುವ ೨೦೨೪ರ ಡಿಸೆಂಬರ್ ೪ ರಿಂದ ೭ರಂದು ಓರಿಸ್ಸಾ ರಾಜ್ಯದ ಪುರಿಯಲ್ಲಿ ನಡೆಯುವ ೨೯ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ರಾಜ್ಯ ತಂಡದಲ್ಲಿ ಕ್ರೀಡಾ ನಿಲಯದಿಂದ ಒಟ್ಟು ೬ ಬಾಲಕರು, ೫ ಬಾಲಕಿಯರು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದು, ಇವರನ್ನು ಸನ್ಮಾನಿಸಿ ಅಭಿನಂದಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
