ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇಲ್ಲಿಯ ಹಿರಿಯ ಕಾದಂಬರಿಕಾರ ಸಿದ್ದರಾಮ ಉಪ್ಪಿನ ಮತ್ತು ಅವರ ಬಾಳ ಸಂಗಾತಿ ಕವಯತ್ರಿ ರೇವತಿ ಅವರು ವಿಜಯಪುರದ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಬಿ.ಎಂ.ಪಾಟೇಲ ವ್ಯೆದ್ಯಕೀಯ ಮಹಾವಿದ್ಯಾಲದ ಅಂಗರಚನಾಶಾಸ್ತೃ ವಿಭಾಗಕ್ಕೆ ಈರ್ವರು ತಮ್ಮ ದೇಹದಾನ ಒಮ್ಮಿಲೇ ಮಾಡಿರುವರು.
ಸಂಸ್ಥೆಯ ಪ್ರಾಚಾರ್ಯ/ ಕಾರ್ಯದರ್ಶಿ ಜಿ.ಎಂ. ಪಾಟೀಲ ಮತ್ತು ಆರ್.ಪಿ.ಮೆಳ್ಳಿ
ಅವರ ಸಮ್ಮುಖದಲ್ಲಿ ಈ ಜನೋಪಯೋಗಿ ಸಫಲ ಕಾರ್ಯ ಮಾಡಿದ್ದು ಒಳ್ಳೆಯ ಶ್ಲಾಘನೀಯವಾಗಿದೆ.
ಈ ದೇಹದಾನದ ಹುಟ್ಟು ಹಾಕಿದವರು ಪೂಜ್ಯ ಸಿದ್ದೇಶ್ವರ ಶ್ರೀಗಳು ಎಂಬುದು ಸದಾ ಸ್ಮರಣೀಯವಾಗಿದೆ.
ಉಪ್ಪಿನ ಕುಟುಂಬದ ಸಾಕ್ಷಿಯಾಗಿ ಅವರ ಆಪ್ತ ರಾಜಶೇಖರ ಭೋವಿ ಹಾಗೂ ಅವರ ಮಗ, ಪತ್ರಕರ್ತ ಶಿವಕುಮಾರ್ ಪ್ರೀತ್ಯಾಧರ ಸಮ್ಮತಿ ತೋರಿಸಿರುವರು.

