Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾ.29ರಿಂದ ಕೊಲ್ಹಾರದಲ್ಲಿ ವಿಶೇಷ ಪ್ರಶಿಕ್ಷಣ ವರ್ಗ

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 28, 2026

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗಿರಿನಾಡಿನ ಸಯೇದ್ ಜಿಲ್ಹಾನಿ ಕಾಲ್ನಡಿಗೆಯ ಹಜ್ ಯಾತ್ರೆ
(ರಾಜ್ಯ ) ಜಿಲ್ಲೆ

ಗಿರಿನಾಡಿನ ಸಯೇದ್ ಜಿಲ್ಹಾನಿ ಕಾಲ್ನಡಿಗೆಯ ಹಜ್ ಯಾತ್ರೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

8,640 ಕಿಲೋ ಮೀಟರ್ ಕಾಲ್ನಡಿಗೆಯ ಮಕ್ಕಾ ಪ್ರಯಾಣ | 3,300ಕಿ.ಮೀ ಕ್ರಮಿಸಿ ವಾಗ್ ಗಡಿ ಪ್ರವೇಶ | ನಿತ್ಯ 30 ಕಿ.ಮೀ ನಡಿಗೆ

ಉದಯರಶ್ಮಿ ದಿನಪತ್ರಿಕೆ

ವರದಿ: ಇಲ್ಯಾಸ್ ಪಟೇಲ್. ಬಳಗಾನೂರ
ಯಾದಗಿರಿ: ನಮ್ಮಲ್ಲಿ ಜನರು ಅನೇಕ ಧರ್ಮಗಳನ್ನು (Religion) ಆಚರಣೆ ಮಾಡುತ್ತಿದ್ದರೂ ಸಹ ಆ ಧರ್ಮದಲ್ಲಿರುವ ನಂಬಿಕೆ ಮಾತ್ರ ಒಂದೇ ಅಂತ ಹೇಳಬಹುದು. ದೇವರಿಗೆ ಕಾಲ್ನಡಿಗೆಯಲ್ಲಿಹೋಗಿ ದೇವರಿಗೆ ಪೂಜೆ ಸಲ್ಲಿಸುವುದು ಬಹುತೇಕವಾಗಿ ಎಲ್ಲಾ ಧರ್ಮದವರು ಮಾಡುವಂತಹ ಒಂದು ಭಕ್ತಿಯ (Devotion) ಕೆಲಸ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಜನರು ದಸರಾ ಹಬ್ಬಕ್ಕೆ ದೂರ ದೂರದ ದೇವಸ್ಥಾನಗಳಿಗೆ ತಾವು ಎಷ್ಟೋ ದಿನಗಳ ಕಾಲದವರೆಗೆ ಬಿಸಿಲು, ಮಳೆ ಮತ್ತು ಚಳಿ ಎನ್ನದೆ ಕಾಲ್ನಡಿಗೆಯಲ್ಲಿ ಹೋಗಿ ಪೂಜೆ ಸಲ್ಲಿಸಿ ಬರುವುದನ್ನು ನಾವು ನೋಡುತ್ತೇವೆ. ಮುಸ್ಲಿಂ (Muslim) ಬಾಂಧವರು ಮೆಕ್ಕಾದಲ್ಲಿರುವ ಹಜ್ ಯಾತ್ರೆಗೆ ಹೋಗಲು ಇಡೀ ವಿಶ್ವದಾದ್ಯಂತದಿಂದ ಬರುವುದನ್ನು ನಾವು ನೋಡುತ್ತೇವೆ.
ಕೆಲವರು ವಿಮಾನದಲ್ಲಿ ಬಂದರೆ, ಕೆಲವರು ಬೇರೆ ಬೇರೆ ಸಾರಿಗೆ ವ್ಯವಸ್ಥೆಗಳ ಮೂಲಕ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಆದರೆ ಯಾದಗಿರಿ ಜಿಲ್ಲೆಯ 35 ವರ್ಷದ ವ್ಯಕ್ತಿಯು ಈ ಬಾರಿಯ ಹಜ್ 2025 ಯಾತ್ರೆಗೆ ನಡೆದುಕೊಂಡು ಹೋಗಲು ನಿರ್ಧರಿಸಿ 8,640 ಕಿಲೋ ಮೀಟರ್ ಕಾಲ್ನಡಿಗೆಯ ಮಕ್ಕಾ ಪ್ರಯಾಣವನ್ನು ಶುರು ಮಾಡಿದ್ದಾರೆ.
ಹಜ್ ಯಾತ್ರೆ ಮುಸ್ಲಿಮರಿಗೆ ಕಡ್ಡಾಯವಾಗಿರುದರಿಂದ. ಇಸ್ಲಾಂ ಧರ್ಮದಲ್ಲಿ ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ, ಮದೀನಾಕ್ಕೆ ಹೋಗಿ ಹಜ್ ಕರ್ಮಗಳನ್ನು ಮುಗಿಸಬೇಕೆಂಬುದು ಪ್ರತಿಯೊಬ್ಬ ಮುಸಲ್ಮಾನ ವ್ಯಕ್ತಿಯ ಇಚ್ಛೆ. ಹಜ್ ಇಸ್ಲಾಂ ಧರ್ಮದ ಐದು ಆಚರಣೆಗಳ ಪೈಕಿ ಒಂದಾಗಿದೆ.
ಹೌದು, ಇದೀಗ ಕರ್ನಾಟಕದ ಗಿರಿನಾಡು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಳಿ ಸಗರ್ ಗ್ರಾಮದ ಸಯೇದ್ ಜಿಲ್ಹಾನಿ 35 ವರ್ಷದ ಯುವಕ ಹಜ್ ಯಾತ್ರೆಯನ್ನು ಕಾಲ್ನಡಿಗೆ ಮೂಲಕವೇ ಕೈಗೊಳ್ಳುವ ನಿರ್ಧಾರ ಮಾಡಿದ್ದು, ಈಗಾಗಲೇ ಕರ್ನಾಟಕದಿಂದ ಪ್ರಾರಂಭವಾಗಿ, ಮಹಾರಾಷ್ಟ್ರ, ಮಧ್ಯಪ್ರದೇಶ್, ರಾಜಸ್ತಾನ್, ಉತ್ತರ ಪ್ರದೇಶ, ಹರಿಯಾಣ, ದಿಲ್ಲಿ, ಪಂಜಾಬ್ ಹೀಗೆ ಹಲವು ರಾಜ್ಯಗಳ ಮೂಲಕ ವಾಗ್ ಗಡಿಗೆ ತಲುಪಿಪಿದ್ದಾರೆ. ಸೌದಿ ಅರೇಬಿಯಾದ ಪವಿತ್ರ ನಗರ ಮೆಕ್ಕಾಕ್ಕೆ ಕಾಲ್ನಡಿಗೆ ಮೂಲಕವೇ ಪ್ರಯಾಣ ಬೆಳೆಸಿಲ್ಲಿರುವ “ಸಯೇದ್ ಜಿಲ್ಹಾನಿ ಹಳಿ ಸಗರ್ ” ರಾಜ್ಯ ಮುಸ್ಲಿಂ ಸಮುದಾಯದ ಪ್ರಶಂಸೆ ಗಳಿಸಿದ್ದಾರೆ.
ಈ ಸುದೀರ್ಘ ಪಯಣದಲ್ಲಿ ಅವರು ಹಲವು ದೇಶಗಳನ್ನು ಸುತ್ತಬೇಕಿದೆ. ಒಟ್ಟಾರೆ 2025ನೇ ಹಜ್ ಯಾತ್ರೆಯಲ್ಲಿ ತಮ್ಮ ಹಜ್ ಯಾತ್ರೆಮಾಡಿ ವಿಶಿಷ್ಟ ಸಾಧನೆ ಪೂರ್ಣಗೊಳಿಸುವ ಪ್ರತಿಜ್ಞ ಅವರದ್ದು. ಈ ವರ್ಷದ ಜೂನ್ 28ರಂದು ತಮ್ಮ ಸಹ ಗ್ರಾಮವಾದ ಶಹಾಪುರ ತಾಲೂಕಿನ ಹಳಿ ಸಗರ್ ಯಿಂದ ತಮ್ಮ ಅದ್ಭುತ ಪ್ರಯಾಣವನ್ನು ಪ್ರಾರಂಭಿಸಿದರು.
ಪ್ರತಿದಿನ, ಅವರು ಕನಿಷ್ಠ ಎಂದರೂ 30ಕಿಲೋ ಮೀಟರ್ ನಡೆಯುತ್ತಾರೆ ಅಂತ ಹೇಳಬಹುದು. ಭಾರತ, ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ನಲ್ಲಿ ಸಂಚರಿಸಿದ ನಂತರ ಅವರು 2025ರಲ್ಲಿ ಹಜ್ ಯಾತ್ರೆಗಾಗಿ ಮೆಕ್ಕಾವನ್ನು ತಲುಪಲಿದ್ದಾರೆ. ಅಂತಿಮವಾಗಿ ಫೆಬ್ರವರಿ -ಮಾರ್ಚ್ 2025ರ ಆರಂಭದಲ್ಲಿ ಸೌದಿ ಅರೇಬಿಯಾವನ್ನು ತಲುಪಲಿದ್ದಾರೆ. ಸೌದಿ ಅರೇಬಿಯಾಕ್ಕೆ ಆಗಮಿಸಿದ ನಂತರ ಅವರು ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲ್ಲಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾ.29ರಿಂದ ಕೊಲ್ಹಾರದಲ್ಲಿ ವಿಶೇಷ ಪ್ರಶಿಕ್ಷಣ ವರ್ಗ

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 28, 2026

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾ.29ರಿಂದ ಕೊಲ್ಹಾರದಲ್ಲಿ ವಿಶೇಷ ಪ್ರಶಿಕ್ಷಣ ವರ್ಗ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 28, 2026
    In ದಿನಪತ್ರಿಕೆ
  • ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ
    In ವಿಶೇಷ ಲೇಖನ
  • ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು
    In (ರಾಜ್ಯ ) ಜಿಲ್ಲೆ
  • ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ದುಡಿದು ತಿನ್ನದವರು ಗಂಡಸರಲ್ಲ :ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಅಂತರಂಗದ ಅರಿವು ಜಾಗೃತಗೊಳಿಸುವ ಪ್ರಕ್ರಿಯೆ ಲಿಂಗದೀಕ್ಷೆ
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಿ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ಮಡಿವಾಳ ಮಾಚಿದೇವರ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.