Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕನ್ನಡದ ಕುಲುಗುರು ಪ್ರೊ ಶಿ.ಶಿ.ಬಸವನಾಳ
ವಿಶೇಷ ಲೇಖನ

ಕನ್ನಡದ ಕುಲುಗುರು ಪ್ರೊ ಶಿ.ಶಿ.ಬಸವನಾಳ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

’ಸಾವಿಲ್ಲದ ಶರಣರು’ ಲೇಖನ ಮಾಲೆ

ಲೇಖನ
ಡಾ.ಶಶಿಕಾಂತ ಪಟ್ಟಣ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ – ರಾಮದುರ್ಗ

ಉದಯರಶ್ಮಿ ದಿನಪತ್ರಿಕೆ

ಕನ್ನಡದ ಕುಲು ಗುರು ಶ್ರೇಷ್ಠ ಸಂಶೋಧಕ ಕನ್ನಡದ ಕಟ್ಟಾಳು
ಅಪ್ಪಟ ಬಸವ ಭಕ್ತ ಮತ್ತು ಕೆ ಎಲ್ ಈ ಸಂಸ್ಥೆಯ ಸ್ಥಾಪಕ ಸದಸ್ಯ ಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಕಾರಣಿ ಪುರುಷ ಹೀಗೆ ಹೇಳುತ್ತಾ ಹೋದರೆ ಪ್ರೊ.ಬಸವನಾಳರು ಮತ್ತು ಅವರ ಕೊಡುಗೆ ಬಗ್ಗೆ ಸುದೀರ್ಘ ಅಧ್ಯಯನ ಸಂಶೋಧನೆ ಅತ್ಯಗತ್ಯ. ಬದುಕಿದ್ದ 58 ವರ್ಷ ವಯಸ್ಸಿನಲ್ಲಿ ವಚನ ಸಾಹಿತ್ಯ ಮತ್ತು ಲಿಂಗಾಯತ ಧರ್ಮ ದರ್ಶನದ ಗಂಭೀರ ಅಧ್ಯಯನಕ್ಕೆ ಚಾಲನೆ ನೀಡಿದರು ಅವರು. ಹಳಕಟ್ಟಿ ಅವರು ಹಾಕಿದ ಭದ್ರ ಬುನಾದಿಗೆ ಕಳಶವಿತ್ತರು ಪ್ರೊ.ಬಸವನಾಳರು. ವಚನಗಳು ಗದ್ಯವೂ ಹೌದು, ಪದ್ಯವು ಹೌದು ಎಂದು ಪದ್ಯಗಳ ರೂಪದಲ್ಲಿ ಸಂಪಾದಿಸಿದ ಹೆಗ್ಗಳಿಕೆ ಪ್ರೊ ಶಿ.ಶಿ.ಬಸವನಾಳರಿಗೆ ಸಲ್ಲಬೇಕು.
ಜನನ ಮತ್ತು ಶಿಕ್ಷಣ
ಎಸ್.ಎಸ್.ಬಸವನಾಳ ಅಂದರೆ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು ೧೮೯೩ ನವೆಂಬರ ೭ ರಂದು ಹಾವೇರಿಯಲ್ಲಿ ಜನಿಸಿದರು. ಇವರ ತಂದೆ ರೇಲ್ವೆ ಸ್ಟೇಶನ್ ಮಾಸ್ತರ ಆಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರ ಪ್ರಾಥಮಿಕ ವಿದ್ಯಾಭ್ಯಾಸ ತೆಲುಗು ಮಾಧ್ಯಮದಲ್ಲಿ ಆಯಿತು. ಗದಗ ಮತ್ತು ಧಾರವಾಡಗಳಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಇತಿಹಾಸ ಮತ್ತು ಅರ್ಥಶಾಸ್ತ್ರ ವಿಷಯಗಳನ್ನು ಅಭ್ಯಸಿಸಿ, ಕ್ರಿ.ಶ.೧೯೧೪ರಲ್ಲಿ ಬಿ.ಏ. ಪದವಿ ಪಡೆದರು.ಇದೆ ವರ್ಷ ಇವರ ತಂದೆ ಹಾಗು ತಾಯಿ ನಿಧನರಾದರು. ಧೃತಿಗೆಡದ ಬಸವನಾಳರು ಮುಂಬಯಿಯಲ್ಲಿ ‘ವೀರಶೈವ ಆಶ್ರಮ’ದಲ್ಲಿಇದ್ದುಕೊಂಡು ೧೯೧೬ರಲ್ಲಿ ಎಮ್.ಏ.ಪದವಿ ಪಡೆದರು.
ಉದ್ಯೋಗ
ಬೆಳಗಾವಿಯ ಹೈಸ್ಕೂಲಿನಲ್ಲಿ ಹಾಗು ಲಿಂಗರಾಜ ಕಾಲೇಜಿನಲ್ಲಿ ಬಸವನಾಳರು ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಸಾಹಿತ್ಯ & ಸಮಾಜಸೇವೆ
ಬಸವನಾಳರು ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಕಾರಿ ಮಂಡಳದ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗು ಕಾರ್ಯಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ೧೯೩೦ರಲ್ಲಿ ಈ ಸಂಸ್ಥೆಯ ಅಂಗವಾಗಿ ‘ಸಾಹಿತ್ಯ ಸಮಿತಿ’ಯನ್ನು ಪ್ರಾರಂಭಿಸಿ, ಅದರ ಕಾರ್ಯಾಧ್ಯಕ್ಷರಾಗಿ ಅನೇಕ ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
೧೯೨೩ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯರಾದರು. ಈ ಸಂಸ್ಥೆಯ ಪರವಾಗಿ ಬಸವನಾಳರು ನಾಗವರ್ಮನ ಕಾವ್ಯಾವಲೋಕನ ಹಾಗು ಭಟ್ಟಾಕಲಂಕದೇವನ ಶಬ್ದಾನುಶಾಸನ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು.
೧೯೨೯ ರಿಂದ ೧೯೩೮ ರವರೆಗೆ ಬಸವನಾಳರು ಮುಂಬಯಿ ವಿಶ್ವವಿದ್ಯಾಲಯದ ಫೆಲೊ ಆಗಿದ್ದರು. ಅಲ್ಲದೆ ಸುಮಾರು ೨೦ ವರ್ಷ ಕಾಲ ಕನ್ನಡ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ ದುಡಿದಿದ್ದಾರೆ.
೧೯೧೮ ರಿಂದ ೧೯೨೭ ರವರೆಗೆ ಬೆಳಗಾವಿಯಲ್ಲಿ ಪ್ರಬೋಧ ಎಂಬ ಮಾಸಿಕವನ್ನು ನಡೆಯಿಸಿದರು. ಧಾರವಾಡದ ಜಯಕರ್ನಾಟಕ ಪತ್ರಿಕೆಗೆ ಸಂಪಾದಕರಾಗಿ ಸಹ ಬಸವನಾಳರು ಸೇವೆ ಸಲ್ಲಿಸಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿಯೂ ಸಹ ಬಸವನಾಳರು ತಮ್ಮ ಕಾಣಿಕೆ ನೀಡಿದ್ದಾರೆ. ಧಾರವಾಡದ ಕರ್ನಾಟಕ ಸೆಂಟ್ರಲ್ ಕೊಆಪರೇಟಿವ್ ಬ್ಯಾಂಕ್ ಇದರ ಪ್ರಥಮ ಮ್ಯಾನೇಜಿಂಗ ಡೈರೆಕ್ಟರ್ ಆಗಿದ್ದರು.
ಕೌಟುಂಬಿಕ ಜೀವನ
ಬಸವನಾಳರ ಮದುವೆ ೧೯೨೦ ಮೇ ೧೦ರಂದು ದಾವಣಗೆರೆಯ ವರ್ತಕರಾದ ಸಾವಳಗಿ ನಾಗಪ್ಪನವರ ಮಗಳು ಶಾಂತಾ ಇವರೊಡನೆ ರಾಣಿಬೆನ್ನೂರು ಊರಿನಲ್ಲಿ ಜರುಗಿತು. ಇವರಿಗೆ ೧೦ ಜನ ಮಕ್ಕಳು: ೪ ಹುಡುಗರು ಹಾಗು ೬ ಹುಡುಗಿಯರು.
ಶಿವಲಿಂಗಪ್ಪ ಶಿವಯೋಗಪ್ಪ
ನಿಧನ
ಬಸವನಾಳರು ೧೯೫೧ ಡಿಸೆಂಬರ ೨೨ ರಂದು ಕರ್ನಾಟಕ ಸಿಂಡಿಕೇಟ್ ಮೀಟಿಂಗ್ ಮುಗಿಸಿಕೊಂಡು ಬಂದು ಮಗಳಿಗೆ ಕಾಫೀ ತರಲು ಹೇಳಿ ಮಲಗುವ ಕೊನೆಯಲ್ಲಿ ಮಂಚದ ಮೇಲೆ ಮಲಗಿದಾಗ ಹೃದಯಾಘಾತದಿಂದ ಪ್ರೊ ಎಸ ಎಸ್ ಬಸವನಾಳರು ನಿಧನರಾದರು.

ಬಸವನಾಳರ ಸಾಹಿತ್ಯಕಾರ್ಯ

ಸಂಪಾದನೆ

  • ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ
  • ಚಾಮರಸನ ಪ್ರಭುಲಿಂಗ ಲೀಲೆ
  • ನಾಗವರ್ಮನ ಕಾವ್ಯಾವಲೋಕನಂ
  • ಷಡಕ್ಷರದೇವನ ಶಬರಶಂಕರ ವಿಳಾಸಂ
  • ಬಾಲಲೀಲಾ ಮಹಾಂತ ಶಿವಯೋಗಿಗಳ ಕೈವಲ್ಯದರ್ಪಣ
  • ಮೈಲಾರದ ಬಸವಲಿಂಗಶರಣರ ಕೃತಿಗಳು
  • ಸರ್ಪಭೂಷಣ ಶಿವಯೋಗಿಗಳ ಕೈವಲ್ಯಕಲ್ಪವಲ್ಲರಿ
  • ಹರಿಹರನ ಮೂರು ರಗಳೆಗಳು
  • ಬಸವಣ್ಣನವರ ಷಟ್‍ಸ್ಥಲದ ವಚನಗಳು
    ಸಾಹಿತ್ಯರಚನೆ
  • ಶರಣ ತತ್ವಪ್ರಕಾಶನ
  • ಕೌಟುಂಬಿಕ ಜೀವನ

ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ

೧೯೪೫ ರಲ್ಲಿ ರಬಕವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಸವನಾಳರು ಅಧ್ಯಕ್ಷರಾಗಿದ್ದರು.

ಶಿಕ್ಷಣ ಪ್ರಸಾರ ಹಾಗು ಉದ್ಯೋಗ*
ಶಿಕ್ಷಣಪ್ರಸಾರದಲ್ಲಿ ಆಸಕ್ತರಾದ ಬಸವನಾಳರು ಉತ್ಸಾಹಿ ಮಿತ್ರರ ಜೊತೆಗೂಡಿ ೧೯೧೬ ಅಕ್ಟೋಬರ ೧೧ ರಂದು ಬೆಳಗಾವಿಯಲ್ಲಿ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸಾಯಿಟಿಯನ್ನು ಕೆ ಎಲ್ ಇ ಸಂಸ್ಥೆ ಸ್ಥಾಪಿಸಿದರು. ಅದರ ಅಂಗವಾಗಿ ೧೯೧೬ ನವೆಂಬರ ೧೧ ರಂದು ಗಿಲಗಂಟಿ-ಅರಟಾಳ ಹೈಸ್ಕೂಲನ್ನು ಸ್ಥಾಪಿಸಿದರು. ಸಂಸ್ಥೆಯ ಸ್ಥಾಪನೆಗೆ ನೆರವು ನೀಡಿದ ರಾವಬಹಾದ್ದೂರ ಆರ್.ಸಿ.ಅರಟಾಳ ಮತ್ತು ರಾವಬಹಾದ್ದೂರ ಗಿಲಗಂಚಿಯವರ ಸಂಯುಕ್ತ ಹೆಸರನ್ನೆ ಈ ಹೈಸ್ಕೂಲಿಗೆ ಇಡಲಾಗಿದೆ. ಬಸವನಾಳರು ಸೊಲ್ಲಾಪುರ,ಅಕ್ಕಲಕೋಟೆ, ಮಂಗ್ರೋಳಿ ಹಾಗು ಬಾರ್ಸಿಗಳಲ್ಲಿ ಸಹ ಕನ್ನಡ ಮಾಧ್ಯಮಿಕ ಶಾಲೆಗಳನ್ನು ಪ್ರಾರಂಭಿಸಿದರು.( ಬೆಳಗಾವಿ, ಸೊಲ್ಲಾಪುರ ಮೊದಲಾದ ಈ ಎಲ್ಲ ಊರುಗಳು ಆಗ ಮುಂಬಯಿ ಪ್ರಾಂತದಲ್ಲಿದ್ದವು).

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.