ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಂಡದ ನಾಯಕ (Pಒಅ) ಹಾಗೂ ಜಲಧಾರೆ ಯೋಜನೆಯ ಗುತ್ತಿಗೆದಾರರು ಇವರೊಂದಿಗೆ ಅ.೨೫ರಂದು ಜಿಲ್ಲಾ ಪಂಚಾಯತಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ನಡೆಯಿತು.
ವಿಜಯಪುರ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಜಲಧಾರೆ ಯೋಜನೆಯನ್ನು ರಾಜ್ಯ ಸರ್ಕಾರದಿಂದ ಮೊದಲ ಹಂತದಲ್ಲಿಯೇ ಅನುಮೋದನೆ ನೀಡಲಾಗಿದೆ. ಇದರ ಉದ್ದೇಶ ಎಲ್ಲ ಗ್ರಾಮೀಣ ಜನವಸತಿಗಳಿಗೆ ಪ್ರತಿ ವ್ಯಕ್ತಿಗೆ ತಲಾ ೫೫ ಲೀಟರನಂತೆ (ಐPಅಆ) ಯಂತೆ ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯದ ಹಿನ್ನೀರನ್ನು ಶುದ್ಧಿಕರಿಸಿ ಪೂರೈಸುವುದಾಗಿರುತ್ತದೆ.
ವಿಜಯಪುರ ಜಿಲ್ಲೆಯ ವಿಜಯಪುರ, ಇಂಡಿ ಮತ್ತು ಬಸವನ ಬಾಗೇವಾಡಿ ತಾಲೂಕಿನ ೭೦೨ ಜನವಸತಿಗಳ ಹಾಗೂ ೫ ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿರುತ್ತದೆ ಹಾಗೂ ಮುದ್ದೇಬಿಹಾಳ ತಾಲೂಕು ಮತ್ತು ಸಿಂದಗಿ ತಾಲೂಕಿನ ೩೪೩ ಜನವಸತಿಗಳ ಹಾಗೂ ೬ ಪುರಸಭೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಾಗಿದ್ದು, ಕಾಮಗಾರಿಯನ್ನು ಮಾರ್ಚ್-೨೦೨೫ರೊಳಗಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಜಿಪಂ ಸಿಇಒ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ಜಿಲ್ಲೆಯ ಜಲ ಜೀವನ ಮಿಷನ್ ಯೋಜನೆಯಡಿ ೧೦೧೬ ಜನವಸತಿ / ಗ್ರಾಮಗಳಿಗೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಯೋಜನೆಯಡಿ ೫೭೭ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ ಹಾಗೂ ೪೩೯ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಸದರಿ ಯೋಜನೆಯಡಿ ಒಟ್ಟು ೪.೬೪ ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳಗಳನ್ನು ನೀಡುವ ಗುರಿ ಹೊಂದಿದ್ದು, ಈಗಾಗಲೇ ಸದರಿ ಯೋಜನೆಯಡಿ ಪೂರ್ಣಗೊಂಡಿರುವ ೫೭೭ ಕಾಮಗಾರಿಗಳಲ್ಲಿ ೩.೨೪ ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಒದಗಿಸಲಾಗಿದೆ. ಬಾಕಿ ಉಳಿದ ೧.೪೧ ಲಕ್ಷ ಮನೆಗಳಿಗೆ ಕಾರ್ಯಾತ್ಮಕ ನಳ ಸಂಪರ್ಕವನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲಾ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕಟ್ಟನಿಟ್ಟಾಗಿ ಕ್ರಮ ವಹಿಸಲು ಸೂಚಿಸಿದರು.
ಶುದ್ಧ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸಲು ಗ್ರಾಮ/ ತಾಲೂಕು ಮಟ್ಟದ ಟಾಸ್ಕಫೋರ್ಸ ಸಮಿತಿಗಳಿಗೆ ನಿಯಮಿತವಾಗಿ ಸಭೆಗಳನ್ನು ನಡೆಸಿ ಎಲ್ಲ ಜಲಮೂಲ ಹಾಗೂ ಜಲ ಸಂಗ್ರಹಾಲಯಗಳ ಮುಂಗಾರಿನ ನಂತರ ಪರೀಕ್ಷಗೆ ಆದ್ಯತೆ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಮಾದರಿ ಪರೀಕ್ಷೆ (Sಚಿmಠಿಟe ಣesಣiಟಿg) ಗಳನ್ನು ನಡೆಸಲು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕಟ್ಟನಿಟ್ಟಾಗಿ ಕ್ರಮ ವಹಿಸಲು ಸೂಚಿಸಿದರು.
ಈ ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಎಸ್ ಕುಂಬಾರ, ಗ್ರಾ.ಕು.ನೀ.ನೈ ಉಪ-ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸತೀಶ ಪಾಟೀಲ, ಗ್ರಾ.ಕು.ನೀ&ನೈ ಉಪ-ವಿಭಾಗ ಇಂಡಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್ ಆರ್ ರುದ್ರವಾಡಿ, ಗ್ರಾ.ಕು.ನೀ&ನೈ ಉಪ-ವಿಭಾಗ ಮುದ್ದೇಬಿಹಾಳದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್ ಎಸ್ ಹಿರೇಗೌಡರ,ಗ್ರಾ.ಕು.ನೀ&ನೈ ಉಪ-ವಿಭಾಗ ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಥಾರಾನಾಥ ರಾಠೋಡ, ಗ್ರಾ.ಕು.ನೀ&ನೈ ಉಪ-ವಿಭಾಗ ಬಸವನ ಬಾಗೇವಾಡಿಯ ಕಿರಿಯ ಅಭಿಯಂತರ ಎನ್ ಬಿ ನಾಯಕ, ವ್ಯಾಪ್ಕೋಸ (WಂPಅಔS) Pಒಅ ತಂಡದ ನಾಯಕ, ಶ್ರೀ ಶ್ರೀನಿವಾಸ ಕನ್ಸ್ಟ್ರಕ್ಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಳ್ಳಾರಿ ಇವರ ಪ್ರತಿನಿಧಿ ಹಾಗೂ ಉಗಿPಖ ಇಟಿgiಟಿeeಡಿs ಐimiಣeಜ, ಹೈದ್ರಾಬಾದ ಇವರ ಪ್ರತಿನಿಧಿ ಹಾಗೂ ಇತರರು ಉಪಸ್ಥಿತರಿದ್ದರೆಂದು ಜಿಲ್ಲಾ ಪಂಚಾಯತಿಯ ಪ್ರಕಟಣೆ ತಿಳಿಸಿದೆ.