ಮುದ್ದೇಬಿಹಾಳ: ಪರಮಾತ್ಮ ಮನುಷ್ಯನಿಗೆ ಶಾಶ್ವತವಾಗಿ ನೀಡಿರುವುದು ಮೂರು-ಆರು ಅಡಿ ಜಾಗದ ಮನೆ. ಆ ಮನೆಯನ್ನು ಶೃಂಗಾರಗೊಳಿಸಲು ಮತ್ತು ಅಲ್ಲಿ ಸದಾಕಾಲ ಸಂತೋಷವಾಗಿ ಇರಲು ಜೀವನದುದ್ದಕ್ಕೂ ಕಷ್ಟದಲ್ಲಿರುವವರಿಗೆ ದಾನ ಧರ್ಮಗಳನ್ನು ಮಾಡಿದಾಗ ಮಾತ್ರ ಸಾಧ್ಯ ಎಂದು ಸಮಾಜ ಸೇವಕ ಅಯೂಬ ಮನಿಯಾರ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸೆ ಶಿಬಿರದಲ್ಲಿ ತಪಾಸಣೆಯ ಬಳಿಕ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ಹತ್ತು ವರ್ಷಗಳಿಂದ ನನ್ನ ತಂದೆ ತಾಯಿಗಳ ಸ್ಮರಣಾರ್ಥವಾಗಿ ಬಡವರು ಹಾಗೂ ನಿರಾರ್ಶಿತರಿಗೆ ಯಾವುದೇ ಜಾತಿ ಬೇಧ ಎನ್ನದೇ ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸೆಯನ್ನು ಆಯೋಜಿಸಿಕೊಂಡು ಬಂದಿದ್ದೇನೆ ಅಲ್ಲದೇ ಕಳೆದ ಇಪ್ಪತ್ತೆöÊದು ವರ್ಷಗಳಿಂದ ರಂಜಾನ್ ಹಬ್ಬದ ಪ್ರಯುಕ್ತ ದಿನಸಿ ಕಿಟ್ ಕೊಡುವ ಕಾರ್ಯಕ್ರಮ ಕೊಡುತ್ತ ಬಂದಿದ್ದೇನೆ. ಬಡವರ ಕಣ್ಣಲ್ಲಿ ಮತ್ತು ಅವರ ಸಂತೋಷದಲ್ಲಿ ನಾನು ನಮ್ಮ ತಂದೆ ತಾಯಿಗಳನ್ನು ಕಾಣುತ್ತೇನೆ ಹೊರತು ಇದರ ಹಿಂದೆ ಯಾವುದೇ ಉದ್ದೇಶ ಇಲ್ಲ ಎಂದರು.
ಮುಜಾಹೀದ ನಮಾಜಕಟ್ಟಿ ಮಾತನಾಡಿ, ತಂದೆ ತಾಯಿಯರನ್ನು ನೋಡಿಕೊಳ್ಳದೇ ಅನಾಥಾಶ್ರಮಗಳಿಗೆ ಸೇರಿಸುತ್ತಿರುವ ಸಧ್ಯದ ಪರಿಸ್ಥಿತಿಯಲ್ಲಿ ಬಡ-ನಿರಾಶ್ರಿತರಿಗೆ ಉಚಿತವಾಗಿ ನೇತ್ರ ಶಸ್ತç ಚಿಕಿತ್ಸೆ ಮಾಡಿಸಿ ಅವರ ಆನಂದದಲ್ಲಿ ತಮ್ಮ ತಂದೆ-ತಾಯಿಯರನ್ನು ಕಾಣುತ್ತಿರುವ ಅಯೂಬ್ ಮನಿಯಾರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸೇವೆಗೆ ಅಯೂಬ್ ಮನಿಯಾರ್ ಅವರ ಪುತ್ರ ಅಫ್ತಾಬ್ ಮನಿಯಾರ್, ಹಿರಿಯ ಪತ್ರಕರ್ತರಾದ, ಎಚ್.ಆರ್.ಬಾಗವಾನ, ಮೈನು ತಡಕಲ್, ಅಬ್ಬಾಸಲಿ ಹುನಕುಂಟಿ, ಮಹಮ್ಮದ ಸಾತೀಹಾಳ, ಐ.ಎಲ್.ಮಮದಾಪೂರ, ಹಾಜಿಮಲಿಂಗ್ ಯಕೀನ ಸಾಥ್ ನೀಡಿದರು.
ಶಿಬಿರದಲ್ಲಿ ಒಟ್ಟು ೩೦೦ ಜನರು ಹೆಸರು ನೊಂದಾಯಿಸಿದ್ದರು. ಪಟ್ಟಣದ ಎಸ್‌ಬಿಐ ಬ್ಯಾಂಕ್ ಬಳಿ ಇರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದಲೇ ತಪಾಸಣೆ ಪ್ರಾರಂಬಿಸಲಾಗಿತ್ತು. ಅದರಲ್ಲಿ 190ಜನ ಫಲಾನುಭವಿಗಳಿಗೆ ಕನ್ನಡಕದ ಅವಶ್ಯಕತೆ ಇದ್ದ ಬಗ್ಗೆ ಮತ್ತು ಇನ್ನುಳಿದ 110ಜನ ಫಲಾನುಭವಿಗಳಿಗೆ ಶಸ್ತç ಚಿಕಿತ್ಸೆಯ ಅವಶ್ಯಕತೆ ಇರುವ ಬಗ್ಗೆ ವೈದ್ಯರು ಖಚಿತಪಡಿಸಿದರು. ಏ24 ರಿಂದ ಪ್ರತೀ ದಿನ 1೦ ಜನರಂತೆ ಶಸ್ತç ಚಿಕಿತ್ಸೆಗೆ ಕರೆದೊಯ್ಯುವದಾಗಿ ಅಯೂಬ್ ಮನಿಯಾರ್ ಮಾಹಿತಿ ನೀಡಿದರು.