ಢವಳಗಿ: ಗ್ರಾಮದ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗಸ್ಟ 6ರಂದು ನಡೆದ 2024-25ನೇ ಸಾಲಿನ ಢವಳಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವು ಯಶಸ್ವಿಯಾಗಿ ಜರುಗಿತು. ಈ ಕ್ರೀಡಾಕೂಟದಲ್ಲಿ ಬಸವ ಬಾಲ ಭಾರತಿ ಶಾಲೆಯ ವಿದ್ಯಾರ್ಥಿಗಳು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ.
ಅದರಲ್ಲಿ ಅಭಿಷೇಕ್ ಕೋಣನವರ್ ಎತ್ತರ ಜಿಗಿತ ಪ್ರಥಮ ಉದ್ದ ಜಿಗಿತ ದ್ವಿತೀಯ ಸ್ಥಾನ, ನಿಂಗನಗೌಡ ಕರಡ್ಡಿ 600 ಮೀಟರ್ ಓಟದಲ್ಲಿ ಪ್ರಥಮ ಉದ್ದ ಜಗಿತದಲ್ಲಿ ಪ್ರಥಮ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಸಂಗಮೇಶ್ ಯಾಳವಾರ್ 100 ಮೀಟರ್ ಓಟದಲ್ಲಿ ಪ್ರಥಮ 400 ಮೀಟರ್ ಓಟದಲ್ಲಿ ಪ್ರಥಮ ಎರಡು ನೂರು ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಮಾರುತಿ ನಾಗರಬೆಟ್ಟ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ, ಅರುಣ್ ಕುಮಾರ್ ಕೋಣನವರ್ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ, ಚೈತ್ರ ಬಿರಾದಾರ್ ಎತ್ತರ ಜಿಗಿತದಲ್ಲಿ ಪ್ರಥಮ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ,
ಬಾಲಕರ ವಿಭಾಗದ ಗುಂಪು ಆಟದಲ್ಲಿ ಖೋ ಖೋ ಮತ್ತು ಕಬಡ್ಡಿ ಹಾಗೂ ರಿಲೇ ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದ ಗುಂಪು ಆಟದಲ್ಲಿ ಖೋ ಖೋ ಮತ್ತು ರಿಲೇ ದ್ವಿತೀಯ ಸ್ಥಾನ ಪಡೆದು ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದರು. ಈ ಉತ್ತಮ ಸಾಧನೆಯ ಹಿಂದೆ ಮುಖ್ಯ ಗುರುಗಳಾದ ರಮೇಶ ಮೂಲಿಮನಿ ಗುರುಗಳದ್ದು ಮುಖ್ಯ ಪಾತ್ರ ಎಂದು ವಿದ್ಯಾರ್ಥಿಗಳು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಕಿಯರಾದ ಜೆ ಎಸ್ ಪಾಟೀಲ್, ಇನ್ನುಳಿದ ಸಹಶಿಕ್ಷಕರುಗಳಾದ ಬಿಎಸ್ ಪಾಟೀಲ್, ಎಸ್ ಬಿ ಬಿರಾದಾರ್, ಹರಿನಾಥ್ ಎನ್, ಎಸ್ ಎಸ್ ಅವಟಿ, ಅತಿಥಿ ಶಿಕ್ಷಕರುಗಳಾದ ಪರಶುರಾಮ್ ಮೂಲಿಮನಿ, ಬಿಬಿ ಫಾತಿಮಾ ಹಾಗೂ ಶಾಲೆಯ ವಿದ್ಯಾರ್ಥಿನಿಯರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

