ವಿಜಯಪುರ: ವಿಜಯಪುರ ನಗರ ಕೇಂದ್ರ ಗ್ರಂಥಾಲಯ ಹಾಗೂ ಶಾಖಾ ಗ್ರಂಥಾಲಯಗಳಲ್ಲಿ ಸಂಗ್ರಹವಾದ ಕನ್ನಡ ಮತ್ತು ಆಂಗ್ಲ ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಅರ್ಹರಿಂದ ದರಪಟ್ಟಿ ಆಹ್ವಾಸಲಾಗಿದೆ ಎಂದು ಉಪ ನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ ಇವರು ತಿಳಿಸಿದ್ದಾರೆ.
ದರಪಟ್ಟಿಯಲ್ಲಿ ಕನ್ನಡ ಮತ್ತು ಆಂಗ್ಲ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳ ಪ್ರತಿ ಕೆ.ಜಿ.ಗೆ ಪ್ರತ್ಯೇಕ ದರ ನಮೂದಿಸಿ ಸಲ್ಲಿಸಬೇಕು, ದರಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿಟ್ಟು ಉಪ ನಿರ್ದೇಶಕರ ಕಚೇರಿ,ನಗರ ಕೇಂದ್ರ ಗ್ರಂಥಾಲಯ, ಗಾಂಧಿ ಚೌಕ, ವಿಜಯಪುರ ವಿಳಾಸಕ್ಕೆ ೨೦೨೪ರ ಆಗಸ್ಟ್ ೯ರ ಸಂಜೆ ೪ ಗಂಟೆ ಒಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು, ಅವಧಿ ಮೀರಿ ಬಂದ ದರಪಟ್ಟಿಗಳನ್ನು ಪರಿಗಣಿಸುವುದಿಲ್ಲ. ಅದೇ ದಿನ ಬಿಡ್ಡುದಾರರ ಸಮಕ್ಷಮದಲ್ಲಿ ೨೦೨೪ರ ಆಗಸ್ಟ್ ೯ರ ಸಂಜೆ ೫ ಗಂಟೆಗೆ ದರಪಟ್ಟಿ ತೆರೆಯಲಾಗುವುದು, ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ ನಗರ ಕೇಂದ್ರ ಗ್ರಂಥಾಲಯ ,ವಿಜಯಪುರ ಇವರನ್ನು ಕಛೇರಿಯ ಸಮಯದಲ್ಲಿ ಭೇಟಿ ನೀಡಿ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಹಳೆಯ ದಿನಪತ್ರಿಕೆ ನಿಯತಕಾಲಿಕೆಗಳ ವಿಲೇವಾರಿ :ದರಪಟ್ಟಿ ಆಹ್ವಾನ
Related Posts
Add A Comment
