ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸಿಕ್ಯಾಬ್ ಸಂಸ್ಥೆಯ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಇವರ ಸಹಯೋಗದೊಂದಿಗೆ ಜುಲೈ ೧೧ ರಂದು ಬಾಗಲಕೋಟ ರಸ್ತೆಯಲ್ಲಿರುವ ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಸುಮಾರು ೩೦೦ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು ಅದರಲ್ಲಿ ೨೪೦ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು. ೮ ಪ್ರತಿಷ್ಠಿತ ಉದ್ಯೋಗದಾತರು ಭಾಗವಹಿಸಿ ೩೧ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು. ೫೦ ಅಭ್ಯರ್ಥಿಗಳಿಗೆ ಮುಂದಿನ ನೇಮಕಾತಿಗಾಗಿ ಕಾಯ್ಡಿರಿಸಲಾಗಿದೆ ಎಂದು ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಸಂದರ್ಭ ಸಹಾಯಕ ಉದ್ಯೋಗಾಧಿಕಾರಿ ಎಸ್.ಎಸ್.ಆಲಮೇಲ, ಉದ್ಯೋಗಾಭಿವೃದ್ಧಿ ಕಾರ್ಯನಿರ್ವಾಹಕ ಮುಸ್ತಾಕ ಗುಂಡಬಾವಡಿ ಹಾಗೂ ಕಾಲೇಜಿನ ಪ್ರಾಚಾರ್ಯ ಸೈಯ್ಯದ್ ಸಮೀರ ಹುಸ್ಸೇನ ಹಾಗೂ ಶ್ರೀಮತಿ ಹಬಿಬಾ ಮ್ಯಾಗಿನಮನಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
