ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮ ಒನ್ ಯೋಜನೆಯಡಿ ಚಡಚಣ ತಾಲೂಕಿನ ಧೂಳಖೇಡ ಗ್ರಾಮದಲ್ಲಿ ಗ್ರಾಮ ಒನ್ ಪ್ರ್ಯಾಂಚೈಸಿಗೆ ಆಸಕ್ತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿದೆ.ಈ ಯೋಜನೆಯಡಿ ೭೫೦ಕ್ಕೂ ಹೆಚ್ಚು ನಾಗರೀಕ ಸೇವೆಗಳನ್ನು ಒದಗಿಸಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ನ. ೧೫ರವರೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳುhttps://sevaone.karnataka.gov.in/services/loginWindow .ಜo ಲಿಂಕ್ ಮೂಲಕ ಪೋರ್ಟಲ್ ಪ್ರವೇಶಿಸಿ, ಸಿಟಿಜನ್ ಲಾಗಿನ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಲಾಗಿನ್ ಆಗಿ ಸರ್ಚ್ ಬಾಕ್ಸ್ನಲ್ಲಿ ಗ್ರಾಮ ಒನ್ ಪ್ರ್ಯಾಂಚೈಸಿ ಎಂದು ನಮೂದಿಸಿ, ಸಂಬಂಧಿಸಿದ ಆಯ್ಕೆಯನ್ನು ಆರಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

