ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವಜನರಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ೨೦೨೬-೨೭ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವವನ್ನು ನವೆಂಬರ್ ೧೨ರಂದು ಆಯೋಜಿಸಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ನಗರದ ಗಾಂಧಿಚೌಕ್ನಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂದು ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ನಡೆಯಲಿದೆ. ಯುವಜನೋತ್ಸವದಲ್ಲಿ ಜನಪದ ನೃತ್ಯ (ತಂಡ), ಜನಪದ ಗೀತೆ (ತಂಡ), ಚಿತ್ರಕಲೆ, ಬೀದಿ ನಾಟಕ (ನುಕ್ಕಡ್ ನಾಟಕ) ಹಾಗೂ ಕವಿತೆ ರಚನೆ ಸೇರಿದಂತೆ ಐದು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಜನಪದ ನೃತ್ಯ ಮತ್ತು ಜನಪದ ಗೀತೆ ಸ್ಪರ್ಧೆಗಳಲ್ಲಿ ತಲಾ ೭+೩ ಸದಸ್ಯರ ತಂಡಗಳಿಗೆ ಅವಕಾಶವಿದ್ದು, ಪ್ರದರ್ಶನಕ್ಕೆ ೫ರಿಂದ ೮ ನಿಮಿಷ಼಼ಗಳ ಕಾಲಾವಕಾಶ ನೀಡಲಾಗಿದೆ. ನಶಾ ಮುಕ್ತ ಯುವ ಸಮುದಾಯ ವಿಷಯಾಧಾರಿತ ಚಿತ್ರಕಲೆ ಸ್ಪರ್ಧೆಗೆ ಆರು ಗಂಟೆಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ನಶಾ ಮುಕ್ತ ಯುವ ಸಮುದಾಯ ವಿಷಯದ ಕುರಿತು ಬೀದಿ ನಾಟಕ (ನುಕ್ಕಾಡ್ ನಾಟಕ)ಸ್ಪರ್ಧೆಯಲ್ಲಿ ೧೦ ಜನರ ತಂಡ ಭಾಗವಹಿಸಬಹುದಾಗಿದ್ದು, ಪ್ರದರ್ಶನಕ್ಕೆ ಏಳು ನಿಮಿಷಗಳ ಕಾಲಾವಕಾಶವಿದೆ. ಕವಿತೆ ರಚನೆ ಸ್ಪರ್ಧೆಗೆ ಒಂದು ಗಂಟೆ ೩೦ ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ೧೫ ರಿಂದ ೨೯ ವಷÀð ವಯೋಮಿತಿಯೊಳಗಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಯುವಜನ ಸಂಘಗಳ ಸದಸ್ಯರು ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ತಮ್ಮ ಹೆಸರನ್ನು ನವೆಂಬರ್ ೧೧ರೊಳಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ದೂರವಾಣಿ ಸಂಖ್ಯೆ ೦೮೩೫೨-೨೫೧೦೮೫ ಹಾಗೂ ಮೊಬೈಲ್ ಸಂಖ್ಯೆ ೭೦೧೯೦೦೮೪೪೩ ಹಾಗೂ ೯೫೩೫೫೦೧೮೭೨ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
