ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿ, ಕೇಸಾಪೂರ ಗ್ರಾಮಗಳಲ್ಲಿ ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಿ, ಮಧ್ಯ ಮುಕ್ತ ಗ್ರಾಮವನ್ನಾಗಿಸಬೇಕು ಎಂದು ಎರಡೂ ಗ್ರಾಮಗಳ ನಿವಾಸಿಗಳು ಬುಧವಾರ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರರಿಗೆ ಮನವಿ ಮಾಡಿಕೊಂಡರು.
ಈ ವೇಳೆ ನಿವೃತ್ತ ಶೀಕ್ಷಕ ವಾಯ್.ಬಿ.ತಳವಾರ ಮಾತನಾಡಿ ಕಳ್ಳಿಗಳ ಜನರು ಮಧ್ಯದ ಚಟಕ್ಕೆ ಅಂಟಿಕೊಂಡು ತಮ್ಮ ಆರೋಗ್ಯ ಮಾತ್ರವಲ್ಲದೇ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಬಡವರ ದಿನ ನಿತ್ಯ ದುಡಿದು ಸಂಪಾದಿಸಿದ ಹಣ ಮಧ್ಯದ ಪಾಲಾಗುತ್ತಿದೆ. ಹಳ್ಳಿಗಳಲ್ಲಿ ಮಧ್ಯ ಮರಾಟ ಮಾಡದಂತೆ ಸಾಕಷ್ಟು ನಿಯಮಗಳಿದ್ದರೂ ಅದೆಲ್ಲವನ್ನು ಉಲ್ಲಂಘಿಸಿ ಚಹಾದ ಅಂಗಡಿ, ಬೀಡಾ ಅಂಗಡಿ ಸೇರಿದಂತೆ ಎಲ್ಲಂದರಲ್ಲಿ ಮಾರಾಟ ಮಾಡುತ್ತಿದ್ದು ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂಗನಗೌಡ ಪಾಟಿಲ, ಜಿ.ಜಿ.ಗೌಡರ, ದ್ಯಾವಣ್ಣ ಹಿರೇಕುರಬರ, ಸಂಗಪ್ಪ ಬೋವಿ, ನಾಗರಾಜ ಹಿರೇಕುರಬರ, ಅಶೋಕ ಹಗರಗುಂಡ, ಪರಸಪ್ಪ ಗೌಡರ, ಬಸವರಾಜ ಭಜಂತ್ರಿ ಬಸವರಾಜ ಬಡಿಗೇರ, ದೇವಕವ್ವ ನಾಲತವಾಡ, ಸತೆವ್ವ ಉಪ್ಪಿನಕಾಯಿ, ಸುವರ್ಣ ಖಾನಾಪುರ, ಮಾಬುಬಿ ತಾಳಿಕೋಟಿ, ಜನವ್ವ ಹಂಡರಗಲ್ಲ, ಯಮನಪ್ಪ ವಾಲೀಕಾರ, ಶರಣಪ್ಪ ಪುಜಾರಿ, ಸಂಗಣ್ಣ ಹಂಪನಗೌಡ, ನಿಂಗನಗೌಡ ಬಿರಾದಾರ, ಮಲ್ಲಗೌಡ ಬಿರಾದಾರ, ನಾಗರಾಜ ಬಿರಾದಾರ, ನಾಗರಾಜ ಬಿರಾದಾರ, ರುದ್ರಮ್ಮ ಬಿರಾದಾರ, ಬಸಮ್ಮ ಬಿರಾದಾರ, ರತ್ನಮ್ಮ ಸರೂರ, ಲಾಳಿಮ್ಮ ಅವಟಿ, ಶಾಂತಮ್ಮ ಬಿರಾದಾರ, ಮಾಹಾಂತಮ್ಮ ಕಂಗಳ, ಬಸವ್ವ ವಾಲೀಕಾರ, ಶಾಂತವ್ವ ವಾಲೀಕಾರ, ಭೋರಮ್ಮ ಕುಂಬಾರ, ಸಂಗಮ್ಮ ಹುಣಸಗಿ, ಶಾರಮ್ಮ ನಿಂ ಹುಣಸಗಿ, ಮಹಾದೇವಿ ಚಲವಾದಿ, ಶಾಂತವ್ವ ಚಲವಾದಿ, ಕಸ್ತೂರಿ ಚಲವಾದಿ, ಮಾಹಾಂತವ್ವ ಚಲವಾದಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

