ಮುದ್ದೇಬಿಹಾಳ: ನಿಂತ ನೀರಿನಲ್ಲಿ ಬಿದ್ದು ಇಬ್ಬರು ಅವರನ್ನು ಬದುಕಿಸಲು ನೀರಿಗಿಳಿದವ ಒಬ್ಬ ಸೇರಿ ಒಟ್ಟು 3 ಜನ ನೀರಿನಲ್ಲಿ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹಡಲಗೇರಿ ಗ್ರಾಮದ ನೀಲಮ್ಮ ಖಿಲಾರಹಟ್ಟಿ(17), ಮುತ್ತಪ್ಪ ಖಿಲಾರಹಟ್ಟಿ(24) ಮತ್ತು ಹಳ್ಳೂರ ಗ್ರಾಮದ ಯಲ್ಲಪ್ಪ ಯಾಳವಾರ(3೦) ಮೃತ ದುರ್ದೈವಿಗಳು.
ಪ್ರಕರಣದ ಹಿನ್ನೆಲೆ ಸಂಶಯಾಸ್ಪದವಾಗಿದ್ದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

