ವಿಜಯಪುರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ನೊಂದಣಿಯಾಗದೇ ಇರುವ ಮಕ್ಕಳ ಪಾಲನಾ ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯನ್ವಯ ಮಾರ್ಚ್ ಅಂತ್ಯದೊಳಗಾಗಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಬಾಲನ್ಯಾಯ ಕಾಯ್ದೆಯನ್ವಯ ಅರೆಕಾಲಿಕ ಅಥವಾ ಪೂರ್ಣವಾಗಿ ಪೋಷಣೆ ಮತ್ತು ರಕ್ಷಣೆ ಅವಶ್ಯಕತೆಯಿರುಜವ ಮಕ್ಕಳನ್ನು ನೋಡಿಕೊಳ್ಳಲು ಅಥವಾ ಕಾನೂನಿನ ಸಂಘರ್ಷದಲ್ಲಿರುವ ಮಕ್ಕಳ ಆರೈಕೆಗೆಂದು ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ಅಥವಾ ಸ್ವಯಂ ಸೇವಾ ಸಂಘಟನೆಗಳಿಂದ ನಡೆಸುವ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಧನ ಸಹಾಯ ಪಡೆಯುವ ಹಾಗೂ ಪಡೆಯದಿರುವ ಎಲ್ಲ ಸಂಸ್ಥೆಗಳು ಆರು ತಿಂಗಳೊಳಗಾಗಿ ನೊಂದಾಯಿತವಾಗಬೇಕು.
ನೊಂದಾಯಿಸಿಕೊಳ್ಳದ ಸಂಸ್ಥೆಗಳ ವಿರುದ್ಧ ಒಂದು ವರ್ಷದವರೆಗೆ ವಿಧಿಸಬಹುದಾದ ಕಾರಾಗೃಹವಾಸ ಅಥವಾ ಒಂದು ಲಕ್ಷಕ್ಕೆ ಕಡಿಮೆಯಿಲ್ಲದಂತೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದ್ದು, ಜೊತೆಗೆ ಅರ್ಜಿ ಸಲ್ಲಿಸಲು ಪ್ರತಿ ೩೦ ದಿನಗಳ ಕಾಲದ ವಿಳಂಬವನ್ನು ಬೇರೆ ಅಪರಾಧ ಎಂದು ಪರಿಗಣಿಸಲಾಗುವುದರಿಂದ ಜಿಲ್ಲೆಯ ಮಕ್ಕಳ ಪಾಲನಾ ಸಂಸ್ಥೆಗಳು ಮಾರ್ಚ್-೨೦೨೪ಅಂತ್ಯದೊಳಗೆ ನೊಂದಾಯಿಸಿಕೊಳ್ಳಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬಿ೪/೩ ವಿವೇಕ ನಗರ ಪಶ್ಚಿಮ, ವಿಜಯಪುರ ದೂ: ೦೮೩೫೨-೨೯೫೨೬೧ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
