ವಿಜಯಪುರ: ಆರೋಗ್ಯ ದೃಷ್ಠಿಯಿಂದ ಮೀನು ಅಧಿಕ ಜನಪ್ರೀಯಗೊಳ್ಳುತ್ತಿರುವ ಆಹಾರ ದೇಶದ ಹೆಚ್ಚುತ್ತಿರುವ ಜನಸಂಖ್ಯೆಗೆ ಪೌಷ್ಠಿಕಾಂಶಭರಿತ ಹಾಗೂ ಕಡಿಮೆ ವೆಚ್ಚದ ಸಮತೋಲ ಆಹಾರವನ್ನು ದೊರೆಯುವಂತೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಸವಾಲಾಗಿದೆ ಎಂದು ಬೀದರನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರ ಡಾ.ಎನ್.ಎ.ಪಾಟೀಲ್ ಹೇಳಿದರು.
ನಗರದ ಹೊರ ವಲಯದಲ್ಲಿರುವ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ, ಭೂತನಾಳದಲ್ಲಿ ಜರುಗಿದ “ಜಲಕೃಷಿಯಲ್ಲಿ ಮುಂದುವರೆದ ತಂತ್ರಜ್ಞಾನ”ಎಂಬ ವಿಷಯದ ಮೇಲೆ ಎರಡು ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭೂತನಾಳ ಮೀನುಗಾರಿಕೆ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥ ಡಾ. ವಿಜಯಕುಮಾರ ಎಸ್. ಅವರು ಮಾತನಾಡಿ, ಪ್ರಸ್ತುತ ಮೀನುಗಾರಿಕೆಯಲ್ಲಿ ಸುಧಾರಿತ ತಂತ್ರಜ್ಞಾನಗಳು ಲಭ್ಯವಿದ್ದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ಗಳಿಸಬಹುದು ಇದಕ್ಕಾಗಿ ಕೇಂದ್ರ ಮತ್ತು ಸರ್ಕಾರದ ಯೋಜನೆಗಳಾದ ಪ್ರಧಾನಮಂತ್ರಿ ಮತ್ಸö್ಯ ಸಂಪದ ಯೋಜನೆ, ಮುದ್ರಾ ಯೋಜನೆ, ಪ್ರಧಾನಮಂತ್ರಿ ಮಂತ್ರಿ ಕಿಸಾನ- ಸಹ ಯೋಜನೆ, ಜಿಲ್ಲಾ ಪಂಚಾಯತ ಯೋಜನೆಗಳು ಹಾಗೂ ಇನ್ನಿತರೆ ಯೋಜನೆಗಳು ಮೀನುಗಾರಿಕೆಯನ್ನು ಉತ್ತೇಜಿಸಲು ಸಹಕಾರಿಯಾಗುತ್ತಿದ್ದು, ರೈತರು ಮತ್ತು ಉದ್ಯೋಮಿದಾರರು ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.
ಭೂತನಾಳ ಮೀನುಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ವಿಜಯ.ಎಸ್.ಅತನೂರ, ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರವಿಕುಮಾರ ಮೋದಿ, ನರಸು, ಸುರೇಶ, ರಾಜೇಶ್ವರಿ ಉಪಸ್ಥಿತರಿದ್ದು. ಸುಮಾರು ೫೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

