ವಿಜಯಪುರ: ಬಿ.ಎಲ್.ಡಿ.ಇ ಶ್ರೀ ಬಿ. ಎಂ. ಪಾಟೀಲ್ ನರ್ಸಿಂಗ್ ಮಹಾವಿದ್ಯಾಲಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸರಕೂಲೆ ದಿಲೀಮಾ ಅಮೀರ್ ಸಾಹೇಬ್ ಅವರಿಗೆ ಪಿಡಿಯಾಟ್ರೀಕ್ ನರ್ಸಿಂಗ್ ವಿಭಾಗದಲ್ಲಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಲಭಿಸಿದೆ.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಫೆ. 27 ರಂದು ನಡೆದ 26ನೇಯ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್, ವೈಧ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟಿಲ, ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಕೆ. ರಮೇಶ ಅವರು ಚಿನ್ನದ ಪದಕ ಪ್ರಧಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ನರ್ಸಿಂಗ್ ಕಾಲೇಜಿನ ಸಹಪ್ರಾದ್ಯಾಪಕರಾದ ಪ್ರವೀಣ ಬಗಲಿ ಉಪಸ್ಥಿತರಿದ್ದರು.
ಸಾಧನೆಯ ಮೂಲಕ ಬಿ ಎಲ್ ಡಿ ಇ ಸಂಸ್ಥೆಗೆ ಮತ್ತು ಕಾಲೇಜಿಗೆ ಕೀರ್ತಿ ತಂದಿರುವ ಸರಕೂಲೆ ದಿಲೀಮಾ ಅಮೀರ್ ಸಾಹೇಬ್ ಅವರನ್ನು ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಅಲ್ಲದೇ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಕಾಲೇಜಿನ ಪ್ರಾಂಶುಪಾಲ ಪ್ರೊ. ಶಾಲ್ಮೋನ್ ಚೋಪಡೆ, ಉಪಪ್ರಾಂಶುಪಾಲೆ ಡಾ. ಸುಚಿತ್ರಾ ರಾಟಿ, ಪಿಡಿಯಾಟ್ರಿಕ್ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಡಾ. ಕವಿತಾ ಕೆ, ಕಾಲೇಜಿನ ಡಾ. ಬಶೀರ್ ಅಹ್ಮದ್ ಸಿಖಂದರ್, ಅಮರನಾಥ ಷಣ್ಮುಘೆ, ಸೌಜನ್ಯ ಪೂಜಾರ, ನಜೀರ್ ಬಳಗಾರ, ಡಾ. ಸಂಕಪ್ಪ ಗುಲಗಂಜಿ, ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

