ವಿಜಯಪುರ: ಹಿರಿಯ ಚಿಂತಕ ಬಿ ಆರ್ ಬನಸೋಡೆ ಅವರು ರಚಿಸಿದ ” ವಿಜಾಪುರದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಜ್ಜೆಗಳು ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ರವಿವಾರ ಮಾ.3ರಂದು ನಗರದ ಕಂದಗಲ್ ಹನುಮಂತ್ರಾಯ ರಂಗ ಮಂದಿರದಲ್ಲಿ ಬೆಳಿಗ್ಗೆ 10: 00 ಗಂಟೆಗೆ ಜರುಗಲಿದೆ.
ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ್ ಪುಸ್ತಕ ಲೋಕಾರ್ಪಣೆಗೊಳಿಸುವರು. ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿಸಚಿವ ಎಂ ಬಿ ಪಾಟೀಲ್, ಸಂಸದ ರಮೇಶ ಚಂ ಜಿಗಜಿಣಗಿ, ಸಚಿವ ಶಿವಾನಂದ ಎಸ್ ಪಾಟೀಲ್ ಆಗಮಿಸುವರು, ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಜು ಆಲಗೂರ, ವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಬಸನಗೌಡ ರಾ ಪಾಟೀಲ ( ಯತ್ನಾಳ್), ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ ಭೂಬಾಲನ್, ರಾಜಶೇಖರ ಯಡಹಳ್ಳಿ ಅಧ್ಯಕ್ಷರು ಬುದ್ಧ ವಿಹಾರ ಸಮಿತಿ ವಿಜಯಪುರ, ಬಸವರಾಜ ಯಲಿಗಾರ ಡಿ ಎಸ್ ಪಿ ವಿಜಯಪುರ, ಪುಂಡಲೀಕ ಮಾನವರ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಮಹಾಂತ ಗುಲಗಂಜಿ ಹಿರಿಯ ಸಾಹಿತಿಗಳು, ಶರಣು ಸಬರದ, ಅಧ್ಯಕ್ಷರು ಜಿಲ್ಲಾ ಯುವ ಪರಿಷತ್ ವಿಜಯಪುರ ಇವರು ಭಾಗವಹಿಸುವರು.
ಪುಸ್ತಕ ಪರಿಚಯವನ್ನು ಸಿಕ್ಯಾಬ ಪಿ ಯು ಕಾಲೇಜಿನ ಉಪನ್ಯಾಸಕ ಯು ಎನ್ ಕುಂಟೋಜಿ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Subscribe to Updates
Get the latest creative news from FooBar about art, design and business.
ಮಾ.3ರಂದು ”ವಿಜಾಪುರದಲ್ಲಿ ಡಾ.ಅಂಬೇಡ್ಕರ್ ಹೆಜ್ಜೆಗಳು” ಕೃತಿ ಬಿಡುಗಡೆ
Related Posts
Add A Comment
