ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಅಭಿಮತ
ದಿ.ಎಂ.ಸಿ.ಮನಗೂಳಿ ಮಹಾ ವೇದಿಕೆ ಸಿಂದಗಿ: ಸಮ್ಮೇಳನಗಳು ಇಂದಿನ ಯುವ ಸಾಹಿತಿಗಳಿಗೆ ಪ್ರೇರಣಾದಾಯಕ. ಕನ್ನಡದ ಗತ ವೈಭವವನ್ನು ಯುವ ಪೀಳಿಗೆಗೆ ವರ್ಗಾಯಿಸುವ ಕಾರ್ಯ ನಮ್ಮ ನಿಮ್ಮೆಲ್ಲರದ್ದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಎಚ್.ಜಿ.ಪ್ರೌಢಶಾಲಾ ಆವರಣದಲ್ಲಿ ದಿ.ಎಂ.ಸಿ.ಮನಗೂಳಿ ಅವರ ಮಹಾ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಿಂದಗಿ ವತಿಯಿಂದ ಹಮ್ಮಿಕೊಂಡ ತಾಲೂಕಾ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರಿಗೆ ಹಿರಿಯ ಸಾಹಿತಿಗಳ ಮಾರ್ಗದರ್ಶನ ಅವರ ಚಿಂತನೆಗಳು ಮನೆ ಮಾತಾಗಬೇಕು. ಸಿಂದಗಿ ತಾಲೂಕಿಗೆ ಐತಿಹಾಸಿಕ ಹಿನ್ನಲೆ ಇದೆ. ಸಿಂದಗಿ ಸಾಹಿತಿಗಳ ತವರೂರು. ಸಂಗೀತ ದಿಗ್ಗಜ ರವೀಂದ್ರ ಹಂದಿಗನೂರ, ನಟ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ, ಪತ್ರಕರ್ತ ರೇ.ಚ.ರೇವಡಿಗಾರ, ಡಾ.ಚನ್ನಪ್ಪ ಕಟ್ಟಿ, ಡಾ.ಎಂ.ಎಂ ಪಡಶೆಟ್ಟಿ, ಹ.ಮ.ಪೂಜಾರ ಸುಶೀಲಾ ಕಮತಗಿಯಂತಹ ದಿಗ್ಗಜ ಮಾತೃಭೂಮಿ ಸಿಂದಗಿ.
ಸಿಂದಗಿ ತಾಲೂಕು ಶೈಕ್ಷಣಿಕವಾಗಿ, ಬೌಗೋಳಿಕವಾಗಿ ಸಾಕಷ್ಟು ಮುಂದುವರಿದಿದೆ. ಕಾರಣ ವಿಜಯಪು ಜಿಲ್ಲೆ ವಿಭಜನೆಯಾದರೆ ಸಿಂದಗಿಯನ್ನು ಜಿಲ್ಲೆಯಾಗಿಸುವಲ್ಲಿ ಪ್ರಥಮ ಆದ್ಯತೆ. ಸಿಂದಗಿ ಹೊಯ್ಸಳರು, ಚಾಲುಕ್ಯರ ಕಾಲದ ಪ್ರಾಚೀನ ಮಂದಿರಗಳನ್ನು ಪುನಶ್ಚೇತನಗೊಳಿಸಿ ಗತ ವೈಭವ ಮತ್ತೇ ಸಾರುವ ಕಾರ್ಯ ಮತ್ತು ಚಿಮ್ಮಲಗಿ ಏತ ನೀರಾವರಿಗೆ ಹೆಚ್ಚಿನ ಒತ್ತು ನೀಡುವೆ ಎಂದರು.
ಇದೇ ಸಂದರ್ಭದಲ್ಲಿ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮಿಜಿಯವರು ಬರೆದ ನಿಜ ಶರಣ ಅಂಬಿಗೇರ ಚೌಡಯ್ಯ ಕೃತಿಯನ್ನು ಬಿಡುಗಡೆ ಬಿಡುಗಡೆಗೊಳಿಸಲಾಯಿತು.
ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಕೃತಿ ಪರಿಚಯಿಸಿ ಮಾತನಾಡಿದ ಅವರು, ಬರಹಗಾರರು ಗುಣಮಟ್ಟದ ಸಾಹಿತ್ಯ ರಚಿಸಬೇಕು. ಇಂದು ಪುಸ್ತಕ ಒದುವ ಹವ್ಯಾಸ ಕಡಿಮೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.
ಬಳಿಕ ಸಿಂದಗಿ ತಾಲೂಕಿನ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ರಾ.ಶಿ.ವಾಡೆದ ಮಾತನಾಡಿದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಕನ್ನಡ ಸಾಹಿತ್ಯ ಮನಮನೆಗೆ ತಲುಪಿಸುವ ಕಾರ್ಯ ಮಾಡುತ್ತಿರುವದು ಹೆಮ್ಮೆಯ ವಿಷಯ. ಕನ್ನಡ ನಮ್ಮ ನೆಲ ಮತ್ತು ಅನ್ನದ ಭಾಷೆಯಾಗಿದೆ. ಕನ್ನಡ ಕಡ್ಡಾಯ ಶಿಕ್ಷಣ ನೀಡಬೇಕು ಎಂದರು.
ಈ ವೇಳೆ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು, ಗುರುದೇವಾಶ್ರಮ ಶಾಂತಗಂಗಾಧರ ಶ್ರಿಗಳು ಸಾನಿಧ್ಯ ವಹಿಸಿದ್ದರು. ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಅಶೋಕ ತೆಲ್ಲೂರ, ಆನಂದ ಭೂಸನೂರ, ಆರ್.ಎಚ್.ಬಿರಾದಾರ, ಝಾಕೀರ ಹುಸೇನ ಮನಿಯಾರ, ಕಸಾಪ ನಿಕಟಪೂರ್ವ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ, ಸಂತೋಷ ಪಾಟೀಲ, ಶಿವಶರಣ ಗುಂದಗಿ, ಅನ್ನಪೂರ್ಣ ಬೆಳ್ಳನವರ, ಅಭಿಷೇಕ ಚಕ್ರವರ್ತಿ, ರಾಜು ಶಿವನಗುತ್ತಿ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ಗಾಯಕವಾಡ, ಸಂತೋಷ ಮಣಿಗಿರಿ, ಮಹಾಂತೇಶ ಪಟ್ಟಣಶೆಟ್ಟಿ ವೇದಿಕೆಯ ಮೇಲಿದ್ದರು.
ಅಶೋಕ ಬಿರಾದಾರ ಸ್ವಾಗತಿಸಿದರು. ರವಿ ಗೋಲಾ ನಿರೂಪಿಸಿದರು. ಎಸ್.ಎಮ್.ಬಿರಾದಾರ ವಂದಿಸಿದರು. ಶಾಂತೂ ರಾಣಾಗೋಳ. ಭೀಮಣ್ಣ ಹೇರೂರ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಡಾ,ಬಿ.ಆರ್.ಅಂಬೇಡ್ಕರ್ ವೃತ್ತದಿಂದ, ಟಿಪ್ಪು ಸುಲ್ತಾನ್ ವೃತ್ತ, ತೋಂಟದ ಸಿದ್ದಲಿಂಗ ಶ್ರೀಗಳ ರಸ್ತೆ, ಸ್ವಾಮೀ ವಿವೇಕಾನಂದ ವೃತ್ತದ ಮಾರ್ಗವಾಗಿ ನಾಡದೇವಿ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಎಚ್.ಜಿ.ಪ್ರೌಡಶಾಲಾ ಆವರಣಕ್ಕೆ ಕರೆ ತರಲಾಯಿತು.
ಗೋಷ್ಠಿ ೦೧: ಜನಪದ ಸಾಹಿತ್ಯ ಕುರಿತು ಪ್ರಥಮ ಗೋಷ್ಠಿಯ ಸಾನಿಧ್ಯವನ್ನು ಯಂಕಂಚಿ ಶ್ರೀಮಠದ ಅಭೀನವ ರುದ್ರಮುನಿ ಶಿವಾಚಾರ್ಯರು, ಮಕ್ಕಳ ಸಾಹಿತಿ ಹ.ಮ.ಪೂಜಾರ ಅವರು ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಅವರು ಸಿದ್ದಲಿಂಗ ಕಿಣಗಿ ಹಾಗೂ ಪಂಡಿತ ಯಂಪೂರೆ ಅವರ ಸಂಪಾದಕತ್ವದ ಸಿಂದಗಿ ಸಂಪದ ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿದರು.
ಈ ವೇಳೆ ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ ಕುರಿತು ಶಿವಲೀಲಾ ಮುರಾಳ, ಜನಪದ ಸಾಹಿತ್ಯದಲ್ಲಿ ಗರತಿ ವಿಷಯದ ಕುರಿತು ಶಿಲ್ಪಾ ಪತ್ತಾರ ಉಪನ್ಯಾಸ ನೀಡಿದರು.
ಗೋಷ್ಠಿ ೦೨: ಮಹಿಳಾ ಪರ ಚಿಂತನೆ ದ್ವಿತೀಯ ಗೋಷ್ಠಿಯ ಸಮ್ಮುಖವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿಸಿ ಪವಿತ್ರಾ ಜಿ ವಹಿಸಿದ್ದರು. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೋಗೆರ ಗೋಷ್ಠಿಯನ್ನು ಉದ್ಘಾಟಿಸಿದರು. ಸಾಹಿತಿ ಶಂಕುಂತಲಾ ಹಾದಿಮನಿ ಡಾ.ಬಿ.ಆರ್. ಅಂಬೇಡ್ಕರ್, ಜ್ಯೋತಿ ನಂದಿಮಠ ವಿಶ್ವಗುರು ಸಾಂಕ್ಕೃತಿಕ ನಾಯಕ ಬಸವಣ್ಣನವರ, ಮಹಿಳಾಪರ ಚಿಂತನೆ ಕುರಿತು ಉಪನ್ಯಾಸ ನೀಡಿದರು. ಅನ್ನಪೂರ್ಣ ಬೆಳ್ಳನವರ ಬೌದ್ಧ ಧರ್ಮದಲ್ಲಿ ಮಹಿಳಾ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಈ ವೇಳೆ ನಾಗರತ್ನ ಮನಗೂಳಿ, ಸುನಂದಾ ಯಂಪುರೆ, ಶೈಲಜಾ ಸ್ಥಾವರಮಠ, ಮಹಾನಂದ ಬಮ್ಮಣ್ಣಿ ಇದ್ದರು.
ಗೋಷ್ಠಿ ೦೩: ತೃತೀಯ ಗೋಷ್ಠಿಯ ಸಾನಿಧ್ಯವನ್ನು ವಿಶ್ವರಾಧ್ಯ ಶ್ರೀಮಠದ ಮಹಾಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮವನ್ನು ಅಶೋಕ ಅಲ್ಲಾಪೂರ ಉದ್ಘಾಟಿಸಿದರು.
ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಡಾ.ಬಿ.ಜಿ.ಪಾಟೀಲ, ಡಿ.ಎಂ.ಪಾಟೀಲ, ಚಂದ್ರಶೇಖರ ದೇವರೆಡ್ಡಿ, ಆರೀಫ್ ಬಿರಾದಾರ, ಟಿ.ಕೆ.ಮಲಗೊಂಡ, ಶ್ರೀಶೈಲ ಕೋರಳ್ಳಿ, ನಿಂಗರಾಜ ಗುಡಿಮನಿ, ಪಂಡಿತ ಯಂಪುರೆ, ಡಾ.ಮಹಾಂತೇಶ ಹಿರೇಮಠ ಇದ್ದರು.
ಈ ವೇಳೆ ಸಿದ್ದರಾಮ ಬ್ಯಾಕೋಡ ಒಳಗೊಂಡಂತೆ ಕವಿಗಳು ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಚಂದ್ರಶೇಖರ ನಾರಗರಬೆಟ್ಟ, ಸಂಗನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಬಸವರಾಜ ಅಗಸರ, ಡಾ.ಪ್ರಕಾಶ ಮೂಡಲಗಿ, ಮಹಾಂತೇಶ ನಾಗೋಜಿ, ಪ್ರತಿಭಾ ಚಳ್ಳಗಿ, ವರ್ಷಾ ಪಾಟೀಲ, ಭೀಮಣ್ಣ ಹೆರೂರ, ಸಾಯಬಣ್ಣ ಪುರದಾಳ, ವಾಯ್.ಸಿ.ಮಯೂರ, ಸಾಯಬಣ್ಣ ದೇವರಮನಿ, ಅಶೋಕ ಗಾಯಕವಾಡ, ಅಂಬೀಕಾ ಪಾಟೀಲ, ಶೋಭಾ ಚಿಗರಿ, ಸೈನಾಬಿ ಮಸಳಿ ಸೇರಿದಂತೆ ಸಾಹಿತ್ಯಾಸಕ್ತರು, ಸಾಹಿತ್ಯಾಭಿಮಾನಿಗಳು ಇದ್ದರು.

