ಪರಶುರಾಮ ಮ್ಯಾಕೇರಿ ಕೊಲೆ | ಹಳೆ ದ್ವೇಷ ಹಾಗೂ ಹಣದ ವ್ಯವಹಾರ | ಆರೋಪಿಗಳು ಪರಾರಿ
ಆಲಮೇಲ: ಕೊರಳ್ಳಿ ಗ್ರಾಮದ ಬಬಲೇಶ್ವರ ರಸ್ತೆಯ ನಂದಿ ಇವರ ಜಮಿನಿನಲ್ಲಿ ಬುಧವಾರ ರಾತ್ರಿ ನಾಲ್ಕು ಜನ ಆರೋಪಿತರು ಸೇರಿಕೊಂಡು, ಅದೇ ಗ್ರಾಮದ ಪರಶುರಾಮ ತಂದೆ ಯಲ್ಲಪ್ಪ ಮ್ಯಾಕೇರಿ (೨೫) ಎಂಬುವವರನ್ನು ಹಣದ ವ್ಯವಹಾರ ಹಾಗೂ ಹಳೆ ದ್ವೇಷದಿಂದ ಬುಧುವಾರ ಪರಶುರಾಮ ತಂದೆ ಯಲ್ಲಪ್ಪ ಮ್ಯಾಕೇರಿ ಕೊಲೆಯಾದ ಘಟನೆ ಆಲಮೇಲ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊರಳ್ಳಿ ಗ್ರಾಮದಲ್ಲಿ ಒಂದು ವರ್ಷದ ಹಿಂದೆ ನಡೆದ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆಯಾದ ಪರಶುರಾಮ ತಂದೆ ಯಲ್ಲಪ್ಪ ಮ್ಯಾಕೇರಿ ಹಾಗೂ ನಾಲ್ಕು ಜನ ಆರೋಪಿತರ ಮಧ್ಯೆ ಆಗಾಗ ಜಗಳ ನಡೆದುಕೊಂಡು ಬರುತ್ತಿದವು, ಈ ಕುರಿತು ಗ್ರಾಮದ ಹಿರಿಯರ ಸಮಕ್ಷಮ ಕೊಲೆಯಾದ ಪರಶುರಾಮ ಹಾಗೂ ಆರೋಪಿತರ ಮಧ್ಯೆ ರಾಜಿ ಸಂಧಾನವು ಕೂಡಾ ಆಗಿತ್ತು, ಕಳೆದ ಒಂದು ವರ್ಷದಿಂದ ಕೊಲೆಯಾದ ಪರಶುರಾಮ ಕೊರಳ್ಳಿ ಗ್ರಾಮವನ್ನು ಬಿಟ್ಟು ಸಿಂದಗಿಯಲ್ಲಿ ವಾಸವಾಗಿ ಉಪ ಜೀವನ ನಡೆಸುತ್ತಿದ್ದನು. ಬುಧುವಾರ ಕೊರಳ್ಳಿ ಗ್ರಾಮದಲ್ಲಿರುವ ತೋಟಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೇಳಿ ಹೋದ ಪರಶುರಾಮನನ್ನು ನಾಲ್ಕು ಜನ ಆರೋಪಿಗಳು ಸೇರಿಕೊಂಡು ಬಾಕು ಹಾಗೂ ಬೀರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ್ದು, ಈ ಕುರಿತು ಮೃತನ ಹೆಂಡತಿ ಶೀಲಾ ಮ್ಯಾಕೇರಿ ಆಲಮೇಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಶ್ ಸೋನವಾಣೆ ಭಗವಾನ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಂಕರ ಮಾರಿಹಾಳ, ಇಂಡಿ ಡಿವೈಎಸ್ಪಿ ಎಚ್.ಜಗದೀಶ, ಸಿಂದಗಿ ಸಿಪಿಐ ನಾನಾಗೌಡ ಪೊಲೀಸ್ ಪಾಟೀಲ, ಪಿಸೈ ಕುಮಾರ ಹಾಡಕಾರ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಗಳ ಪತ್ತೆ ಕುರಿತು ತಂಡವನ್ನು ರಚಿಸಿ, ಆರೋಪಿಗಳ ಶೋಧಕಾರ್ಯ ಕೈಗೊಂಡಿದ್ದಾರೆ.

