ಹೆಸ್ಕಾಂ ವಿಭಾಗೀಯ ಕಚೇರಿ ಕಂಪೌಂಡ್ ಗೋಡೆ ನಿರ್ಮಾಣ | ಸಚಿವ ಶಿವಾನಂದ ಪಾಟೀಲ ಸೂಚನೆ
ಬಸವನಬಾಗೇವಾಡಿ: ಪಟ್ಟಣದ ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಭಾಗೀಯ ಕಚೇರಿಯ ಕಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಗುರುವಾರ ಸಂಜೆ ಅಡಿಗಲ್ಲು ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಹೆಸ್ಕಾಂ ವಿಭಾಗೀಯ ಕಚೇರಿಯ ಕಂಪೌಂಡ್ ಗೋಡೆ ಕಾಮಗಾರಿಯನ್ನು ಗುತ್ತಿಗೆದಾರರು ಉತ್ತಮ ಗುಣಮಟ್ಟದಿಂದ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಈ ಕಂಪೌಂಡ್ ಗೋಡೆ ಪಕ್ಕದಲ್ಲಿ ಬೈಪಾಸ್ ರಸ್ತೆ ನಿರ್ಮಾಣವಾಗುವದರಿಂದಾಗಿ ಮುಂದೆ ಯಾವುದೇ ತೊಂದರೆಯಾಗದಂತೆ ಕಂಪೌಂಡ್ ಕಾಮಗಾರಿ ನಿರ್ಮಾಣವಾಗುವ ಕಡೆಗೆ ಗುತ್ತಿಗೆದಾರರು ಗಮನ ಹರಿಸಿ ತಮ್ಮ ಕಾಮಗಾರಿ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಹೆಸ್ಕಾಂ ಇಲಾಖೆಯ ಸಿವ್ಹಿಲ್ ಎಇಇ ಜಿ.ಟಿ.ಬಡಿಗೇರ ಅವರು, ವಿಭಾಗೀಯ ಕಚೇರಿಗೆ ೨.೨೫ ಮೀಟರ ಉದ್ದದ ಕಂಪೌಂಡ್ ಗೋಡೆ ಕಾಮಗಾರಿ ರೂ. ೩೮.೫ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಅಧೀಕ್ಷಕ ಅಭಿಯಂತರ ಸಿದ್ದಪ್ಪ ಬೆಂಜಗೆರೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ.ಬಿ.ಸಂಪನ್ನವರ, ಸಿದ್ರಾಮ ಬಿರಾದಾರ, ಸಹಾಯಕ ಅಭಿಯಂತರರಾದ ಎಸ್.ಎಂ.ತಳವಾರ, ಎಸ್.ಎಂ.ಕೆಂಗನಾಳ, ಗುತ್ತಿಗೆದಾರ ರಾಜಶೇಖರ ಚೋರಗಿ, ಸುಭಾಸ ನಾಶಿ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಸದಸ್ಯರಾದ ಜಗದೇವಿ ಗುಂಡಳ್ಳಿ, ಪ್ರವೀಣ ಪೂಜಾರಿ, ಮುಖಂಡರಾದ ಶೇಖರ ಗೊಳಸಂಗಿ, ಬಸಣ್ಣ ದೇಸಾಯಿ,ಬಸವರಾಜ ಕೋಟಿ, ಬಸವರಾಜ ರಾಯಗೊಂಡ, ಸಿ.ಎಸ್.ಪಾಟೀಲ, ರವಿ ರಾಠೋಡ, ರವಿ ಚಿಕ್ಕೊಂಡ,ನಿಸಾರ ಚೌಧರಿ, ಎಂ.ಜಿ.ಆದಿಗೊಂಡ, ಸಂಕನಗೌಡ ಪಾಟೀಲ, ಪರಶುರಾಮ ಜಮಖಂಡಿ, ರಮಜಾನ ಹೆಬ್ಬಾಳ,ಕಾಶೀನಾಥ ರಾಠೋಡ, ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ, ಪುರಸಭೆ ಅಭಿಯಂತರ ಸಂತೋಷ ಗಿಡ್ಡಸಣ್ಣನವರ ಇತರರು ಇದ್ದರು.

