ವಿಜಯಪುರ: ಜನಮಾನಸದಲ್ಲಿ ಬೆಳೆದು ಬಂದ ಸಂಗೀತ ವಿಶ್ವಬಾಷಿಕವಾಗಿದೆ. ಭಾವದ ಅಂತರ್ಮುಖಿಯಾದ ಗಾಯನಕ್ಕೆ ಜಾತಿ ಮತ, ಪಂಥಗಳ ಹಂಗಿಲ್ಲ. ಅದು ಶುದ್ಧ ವಿಶ್ವತತ್ವ ಇಂತಹ ಸಂಗೀತಕ್ಕೆ ಚೌಕಟ್ಟನ್ನು ಗುರು ಪಂಪರೆಯನ್ನು ಹಾಕಿಕೊಟ್ಟವರು. ಹಾನಗಲ್ಲ ಶಿವಯೋಗಿಗಳು ಹಾಗೂ ಪಂಚಾಕ್ಷರ ಕವಿ ಗವಾಯಿಗಳು ಎಂದು ಜಮಖಂಡಿ ಓಲೆಮಠದ ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ನಗರದ ಗಾನಬನದಲ್ಲಿ ಕುಮಾರ ಶಿವಯೋಗಿಗಳ ೯೪ನೇ ಪುಣ್ಯ ಸ್ಮರಣೋತ್ಸವ ಹಾಗೂ ಪಂಡಿತ ಪಂಚಾಕ್ಷರ ಗವಾಯಿಗಳ ೧೩೨ನೇ ಜಯಂತ್ಯೋತ್ಸವ ಕಾರ್ಯಕ್ರಮದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರು ಕಾರುಣ್ಯ ಸತತ ಅಭ್ಯಾಸ ಹಾಗೂ ಶ್ರದ್ಧೆ ಇದ್ದರೆ ಸಂಗೀತ ಸಾಧನೆ ಆಗುತ್ತದೆ. ಲತಾ ಮಂಗೇಶ್ಕರ ಅವರಿಗೆ ಬಾಲ್ಯದಲ್ಲಿ ಪಂಚಾಕ್ಷರಿ ಗವಾಯಿಗಳು ಆಶೀರ್ವದಿಸಿದ್ದನ್ನು ಸ್ಮರಿಸಬಹುದು. ಅಂಧರ ಅನಾಥರ ಸೇವೆಗೈಯುತ್ತಿರುವ ಉಭಯ ಪ್ರತಿಷ್ಠಾನಗಳ ಕಾರ್ಯವನ್ನು ಸರ್ಕಾರ ಗುರುತಿಸಲಿ ಎಂದರು.
ಶಿವಯೋಗ ಮಂದಿರದ ಧರ್ಮದರ್ಶಿ ಎಂ.ಬಿ.ಹಂಗರಗಿ ಮಾತನಾಡಿದರು.
ಹುಬ್ಬಳ್ಳಿಯ ವಿರಕ್ತಮಠದ ಸಿದ್ಧಲಿಂಗೇಶ್ವರರು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುದ್ದಡಗಾದ ಸಂಗಮೇಶ್ವರ ಸಂಸ್ಥಾನ ಹಿರೇಮಠದ ಸದ್ಯೋಜಾತ ರೇಣುಕ ಶಿವಾಚಾರ್ಯರು, ಕವಿಗಳಾದ ಮುದಗೇರಿ ರಮೇಶ ಕುಮಾರ, ನಾಗಯ್ಯ ಜಿ. ಹಿರೇಮಠ, ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನದ ಗೌರವ ಅಧ್ಯಕ್ಷ ಬಸವರಾಜ ಕೆಂಗನಾಳ ವೇದಿಕೆ ಮೇಲಿದ್ದರು.
ಹಿರಿಯ ಸಂಗೀತಗಾರರಾದ ಶ್ರೀಶೈಲ ಚಿಕ್ಕಮಠ, ಗದುಗಿನ ಗಾಯಕ ವೆಂಕಟೇಶ ಆಲಕೋಡ ಶಾಸ್ತ್ರೀಯ ಸಂಗೀತ ಹಾಡಿದರು. ಗಾನಬನದ ವಿದ್ಯಾರ್ಥಿಗಳು ಗಾಯನದ ಮೂಲಕ ಎಲ್ಲರ ಗಮನ ಸೆಳೆದರು. ಪಂಡಿತ ತೋಂಟದಾರ್ಯ ಕವಿ ಗವಾಯಿಗಳ ಸಂಗೀತದೊಂದಿಗೆ ಸಮಾರಂಭ ಸಂಪನ್ನಗೊಂಡಿತು.
ಚಿದಾನಂದ ಜಡಿಮಠ ಸ್ವಾಗತಿಸಿದರು. ಕೈಲಾಸನಾಥ ಮದಭಾವಿ ನಿರೂಪಿಸಿದರು. ಪಿ.ಸಿ.ಅರಕೇರಿಮಠ ನಿರ್ವಹಿಸಿದರು. ಸುಭಾಸಚಂದ್ರ ಕನ್ನೂರ ವಂದಿಸಿದರು.
ಕಾರ್ಯಕ್ರಮದಲ್ಲಿ ವಿರೇಶ ಜಂಗಿನಮಠ, ಎನ್.ವೈ.ದೇವಣಗಾಂವಿ, ಪಿ.ಎಸ್. ತಳಕೇರಿ, ಮಲ್ಲಯ್ಯ ಹಿರೇಮಠ, ಆನಂದ ಮುಳಸಾವಳಗಿ, ಡಾ. ಪರೀಕ್ಷಿತ ಕೋಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

